Tuesday, May 18, 2021
Homeಸುದ್ದಿ ಜಾಲಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಪತ್ನಿ ಅಂಬುಜಾ ವಿಧಿವಶ!

ಇದೀಗ ಬಂದ ಸುದ್ದಿ

ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಪತ್ನಿ ಅಂಬುಜಾ ವಿಧಿವಶ!

ಬೆಂಗಳೂರು : ಕನ್ನಡದ ಹಿರಿಯ ನಟ ಹಾಗೂ ನಿರ್ಮಾಪಕ ದ್ವಾರಕೀಶ್‌ ಪತ್ನಿ ಅಂಬುಜಾ ದ್ವಾರಕೀಶ್ (80 ವರ್ಷ) ಶುಕ್ರವಾರ ವಿಧಿವಶರಾಗಿದ್ದಾರೆ.

ಈ ಬಗ್ಗೆ ದ್ವಾರಕೀಶ್ ಕುಟುಂಬದ ಮೂಲದವರು ತಿಳಿಸಿದ್ದು, ಎಚ್ ಎಸ್ ಆರ್ ಲೇ ಔಟ್ ನ ತಮ್ಮ ಸ್ವಗೃಹದಲ್ಲಿಯೇ ಅಂಬುಜಾ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಂಬುಜಾ ಅವರಿಗೆ ಸದ್ಯ 80 ವರ್ಷ ವಯಸ್ಸಾಗಿದ್ದು, ಐದು ಮಂದಿ ಗಂಡು ಮಕ್ಕಳು ಮತ್ತು ಪತಿ ದ್ವಾರಕೀಶ್ ಅವರನ್ನು ಅಗಲಿದ್ದಾರೆ. ಇಂದು(ಶುಕ್ರವಾರ) ಸಂಜೆ ಅವರ ಅಂತ್ಯ ಸಂಸ್ಕಾರ ನೆರವೇರಲಿರುವುದಾಗಿ ದ್ವಾರಕೀಶ್ ಪುತ್ರ ಯೋಗಿಯವರು ತಿಳಿಸಿದ್ದಾರೆ.

ಇನ್ನು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅಂಬುಜಾ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಎಚ್ ಎಸ್ ಅರ್ ಲೇಔಟ್ ನ ಅಪಾರ್ಟ್ಮೆಂಟ್ ನಲ್ಲಿ ಸದ್ಯ ಅಂಬುಜಾ ಪಾರ್ಥೀವ ಶರೀರ ಇಡಲಾಗಿದೆ. ಶುಕ್ರವಾರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img