Tuesday, May 11, 2021
Homeಸುದ್ದಿ ಜಾಲರಾಮಮಂದಿರಕ್ಕೆ ದೇಣಿಗೆ ನೀಡಿದ್ದ 22 ಕೋಟಿ ರೂ. ಮೌಲ್ಯದ 15 ಸಾವಿರ ಚೆಕ್ ಬೌನ್ಸ್

ಇದೀಗ ಬಂದ ಸುದ್ದಿ

ರಾಮಮಂದಿರಕ್ಕೆ ದೇಣಿಗೆ ನೀಡಿದ್ದ 22 ಕೋಟಿ ರೂ. ಮೌಲ್ಯದ 15 ಸಾವಿರ ಚೆಕ್ ಬೌನ್ಸ್

 ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆಯಾಗಿ ಸಂಗ್ರಹಿಸಲಾಗಿದ್ದ 22 ಕೋಟಿ ರೂಪಾಯಿ ಮೌಲ್ಯದ 15,000 ಚೆಕ್ ಗಳು ಬೌನ್ಸ್ ಆಗಿವೆ.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಡಿಟ್ ವರದಿಯಲ್ಲಿ ಈ ಮಾಹಿತಿ ಗೊತ್ತಾಗಿದೆ. ಚೆಕ್ ಗಳನ್ನು ನೀಡಲಾದ ಖಾತೆಗಳಲ್ಲಿ ಕಡಿಮೆ ಹಣ ಇದ್ದ ಕಾರಣ, ತಾಂತ್ರಿಕ ಸಮಸ್ಯೆಯಿಂದ ಚೆಕ್ ಬೌನ್ಸ್ ಆಗಿವೆ.

ಬೌನ್ಸ್ ಆಗಿರುವ ಚೆಕ್ ನೀಡಿದವರನ್ನು ಸಂಪರ್ಕಿಸಿ ಮತ್ತೊಮ್ಮೆ ದೇಣಿಗೆ ಪಾವತಿಸುವಂತೆ ಬ್ಯಾಂಕುಗಳು ಮನವಿ ಮಾಡಿವೆ. ಟ್ರಸ್ಟ್ ಸದಸ್ಯ ಡಾ. ಅನಿಲ್ ಮಿಶ್ರಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಬೌನ್ಸ್ ಆಗಿರುವ 15 ಸಾವಿರ ಚೆಕ್ ಗಳಲ್ಲಿ 2002 ದಷ್ಟು ಚೆಕ್ ಗಳನ್ನು ಅಯೋಧ್ಯಯಲ್ಲಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿ ನಿರ್ಮಾಣಕ್ಕೆ ವಿಶ್ವ ಹಿಂದೂ ಪರಿಷತ್ ಜನವರಿ 15 ರಿಂದ ಫೆಬ್ರವರಿ 17 ರವರೆಗೆ ದೇಶಾದ್ಯಂತ ದೇಣಿಗೆ ಸಮರ್ಪಣೆ ಅಭಿಯಾನ ಕೈಗೊಂಡಿತ್ತು. ಸುಮಾರು 5 ಸಾವಿರ ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಲಾಗಿದೆ. ಇನ್ನು ಅಂತಿಮ ಲೆಕ್ಕಾಚಾರದ ಬಗ್ಗೆ ಮಾಹಿತಿ ನೀಡಿಲ್ಲ ಎನ್ನಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img