Sunday, May 16, 2021
Homeದೊಡ್ಡಬಳ್ಳಾಪುರಅತ್ತೆ-ಮಾವನಿಗೆ ಚಾಕುವಿನಿಂದ ಇರಿದ ಅಳಿಯ... ಕಾರಣವೇನು ಗೊತ್ತಾ?

ಇದೀಗ ಬಂದ ಸುದ್ದಿ

ಅತ್ತೆ-ಮಾವನಿಗೆ ಚಾಕುವಿನಿಂದ ಇರಿದ ಅಳಿಯ… ಕಾರಣವೇನು ಗೊತ್ತಾ?

ದೊಡ್ಡಬಳ್ಳಾಪುರ: ಗಂಡನ ಕುಡಿತದ ಚಟಕ್ಕೆ ಬೇಸತ್ತು ಪತ್ನಿ ತವರು ಮನೆಗೆ ಬಂದ್ದಿದ್ದಳು. ಇದೇ ಕೋಪದಲ್ಲಿ ಯುಗಾದಿಯಂದು ಹೆಂಡತಿಯ ಮನೆಗೆ ಬಂದ ಗಂಡ ಅತ್ತೆ-ಮಾವ ಇಬ್ಬರಿಗೂ ಚಾಕುವಿನಿಂದ ಇರಿದಿದ್ದಾನೆ.

ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಶ್ರೀನಿವಾಸ್ (65), ಜಯಮ್ಮ (60) ಅಳಿಯನಿಂದ ಚೂರಿ ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಮಂಜುನಾಥ್ (40)ನನ್ನು ದೊಡ್ಡಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ: ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ದೇವಸ್ಥಾನದ ಬಳಿಯ ನಿವಾಸಿಗಳಾದ ಶ್ರೀನಿವಾಸ್ ಮತ್ತು ಜಯಮ್ಮ ದಂಪತಿ ತಮ್ಮ ಮಗಳಾದ ಅನುಸೂಯಳನ್ನು ಗೌರಿಬಿದನೂರು ನಗರದ ಮಂಜುನಾಥ್ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು. ಇಬ್ಬರಿಗೂ ಮದುವೆಯಾಗಿ 22 ವರ್ಷಗಳಾಗಿದ್ದು, ಮಕ್ಕಳೊಂದಿಗೆ ಗೌರಿಬಿದನೂರಿನ ಧೋಬಿ ಕಾಲೋನಿಯಲ್ಲಿ ವಾಸವಾಗಿದ್ದರು.

ಕಟಿಂಗ್​ ಶಾಪ್ ಇಟ್ಟುಕೊಂಡಿದ್ದ ಮಂಜುನಾಥ್ ಸಂಪಾದನೆಯ ಹಣವನ್ನು ಕುಡಿದು ಮುಗಿಸುತ್ತಿದ್ದನಂತೆ. ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಅನುಸೂಯ ಸಂಸಾರದ ಹೊರೆ ಹೊತ್ತಿದ್ದಳು. ಇಷ್ಟಾದರು ಮಂಜುನಾಥ್ ಹೆಂಡತಿಯ ನಡೆಯ ಬಗ್ಗೆ ಸಂಶಯಪಟ್ಟು ಜಗಳ ಮಾಡುತ್ತಿದ್ದನಂತೆ. ಇದರಿಂದ ಬೇಸತ್ತ ಅನುಸೂಯ 9 ದಿನಗಳ ಹಿಂದೆ ತವರು ಮನೆಗೆ ಬಂದಿದ್ದಳು. ಹೆಂಡತಿ ಮನೆಗೆ ಬಂದ ಮಂಜುನಾಥ್ ಆಕೆಗೆ ಚಾಕುವಿನಿಂದ ಇರಿಯಲು ಮುಂದಾಗಿದ್ದ.

ಈ ವೇಳೆ ಅಡ್ಡ ಬಂದ ಅತ್ತೆ-ಮಾವನಿಗೆ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿತಕ್ಕೆ ಒಳಗಾದ ಶ್ರೀನಿವಾಸ್ ಮತ್ತು ಜಯಮ್ಮರನ್ನು ಚಿಕಿತ್ಸೆಗಾಗಿ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಮಂಜುನಾಥ್​ನನ್ನು ಬಂಧಿಸಲಾಗಿದ್ದು, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಪುರುಷೋತ್ತಮ

ವಿ.ನ್ಯೂಸ್.24 ಕನ್ನಡ

ದೊಡ್ಡಬಳ್ಳಾಪುರ

ಬೆಂಗಳೂರು ಗ್ರಾಮಾಂತರ ಜಿಲ್ಲೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img