Monday, May 10, 2021
Homeಸುದ್ದಿ ಜಾಲಪ್ರೀಯಕರನ ಜತೆ ಮಾತನಾಡಲು ಅಡ್ಡಿಪಡಿಸಿದ ತಮ್ಮನನ್ನೇ ಕೊಂದ ಸಹೋದರಿ!

ಇದೀಗ ಬಂದ ಸುದ್ದಿ

ಪ್ರೀಯಕರನ ಜತೆ ಮಾತನಾಡಲು ಅಡ್ಡಿಪಡಿಸಿದ ತಮ್ಮನನ್ನೇ ಕೊಂದ ಸಹೋದರಿ!

ರಾಯ್ಬರೇಲಿ: ಬಾಯ್​ಫ್ರೆಂಡ್​​ ಜತೆ ಮಾತನಾಡಲು ಹಾಗೂ ಚಾಟ್​ ಮಾಡಲು ಅಡ್ಡಿಪಡಿಸಿದ್ದಕ್ಕೆ 15 ವರ್ಷದ ಹುಡುಗಿಯೊಬ್ಬಳು ಇಯರ್​ ಫೋನ್​ ಕೇಬಲ್​ನಿಂದ 9 ವರ್ಷದ ಸಹೋದರನ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ರಾಯ್​ಬರೇಲಿಯಲ್ಲಿ ನಡೆದಿದೆ.

ಕೊಲೆ ಮಾಡಿದ ಬಳಿಕ ತಮ್ಮನ ಮೃತದೇಹವನ್ನು ಸ್ಟೋರ್​ ರೂಮ್​ನಲ್ಲಿ ಇಟ್ಟಿದ್ದಳು ಎಂದು ತಿಳಿದುಬಂದಿದೆ. ಪೊಲೀಸ್​ ಮೂಲಗಳ ಪ್ರಕಾರ ಪಾಲಕರು ಮನೆಯಲ್ಲಿ ಇಲ್ಲದಿದ್ದಾಗ ಹುಡುಗಿ ಗಂಟೆಗಟ್ಟಲೆ ಹುಡುಗನೊಬ್ಬನ ಜತೆ ಫೋನ್​ನಲ್ಲಿ ಮಾತನಾಡುತ್ತಿದ್ದಳಂತೆ. ಇದನ್ನು ಮೊದಲೇ ಗಮನಿಸಿದ್ದ ಆಕೆಯ ತಮ್ಮ ಕೆಲವು ದಿನಗಳ ಹಿಂದೆ ಪಾಲಕರಿಗೆ ಮಾಹಿತಿ ನೀಡಿದ್ದ. ಇದಾದ ಬಳಿಕ ಪಾಲಕರು ಬೈದು ಬುದ್ಧಿವಾದ ಹೇಳಿದ್ದರು.

ಕಳೆದ ಗುರುವಾರ (ಏಪ್ರಿಲ್​ 8) ಎಂದಿನಂತೆ ಮನೆಯಲ್ಲಿ ಯಾರು ಇಲ್ಲದಿದ್ದಾಗ ಹುಡುಗಿ ಫೋನ್​ನಲ್ಲಿ ಬಿಜಿಯಾಗಿದ್ದಳು. ಇದನ್ನು ನೋಡಿದ ತಮ್ಮ ಮಾತನಾಡದಂತೆ ತಡೆಯುತ್ತಾನೆ. ಬಳಿಕ ಇಬ್ಬರ ನಡುವೆ ಜಗಳ ನಡೆಯುತ್ತಿದೆ. ತಮ್ಮ ಅಕ್ಕನ ಮೇಲೆ ದಾಳಿ ಮಾಡಿದಾಗ ಸಹನೆ ಕಳೆದುಕೊಳ್ಳುವ ಸಹೋದರಿ ಇಯರ್​ ಫೋನ್​ನಿಂದ ತಮ್ಮನ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆಂದು ರಾಯ್​ಬರೇಲಿ ಪೊಲೀಸ್​ ವರಿಷ್ಠಾಧಿಕಾರಿ ಶ್ಲೋಕ್​ ಕುಮಾರ್​ ಮಾಹಿತಿ ನೀಡಿದ್ದಾರೆ.

ಘಟನೆ ಗುರುವಾರ ನಡೆದಿದ್ದು ಸೋಮವಾರ ಬೆಳಕಿಗೆ ಬಂದಿದೆ. ಇದಾದ ಬಳಿಕ ವಿಚಾರಣೆಯಲ್ಲಿ ಹುಡುಗಿ ತಪ್ಪೊಪ್ಪಿಕೊಂಡಿದ್ದಾಳೆ. ಇದಕ್ಕೂ ಮುನ್ನ ಸಹೋದರ ನಾಪತ್ತೆಯಾಗಿದ್ದಾನೆಂದು ಪಾಲಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಇಳಿದರು.

ಹೀಗಿರುವಾಗ ಮನೆಯ ಸ್ಟೋರ್​ ರೂಮ್​ನಲ್ಲಿ ಕೆಟ್ಟ ವಾಸನೆ ಬರಲು ಆರಂಭಿಸಿದೆ. ಪಾಲಕರು ತೆರೆದು ನೋಡಲು ಮಗನ ಮೃತದೇಹ ಕಂಡು ಶಾಕ್​ ಆಗಿದ್ದಾರೆ. ಇದಾದ ಬಳಿಕ ಬಾಲಕನ ತಂದೆ ಎಫ್​ಐಆರ್​ ದಾಖಲಿಸಿದ್ದಾರೆ. ಅಲ್ಲದೆ, ಪ್ರಕರಣ ಸಂಬಂಧ ನೆರೆಮನೆಯವರನ್ನು ವಶಕ್ಕೆ ಪಡೆಯಲಾಗಿತ್ತು.

ಆದಾಗ್ಯು ವಿಚಾರಣೆ ವೇಳೆ ಪೊಲೀಸರು ಘಟನೆ ನಡೆದ ಸಮೀಪವಿದ್ದ ಸಿಸಿಟಿವಿ ಪರಿಶೀಲಿಸಲು ಅಂದು ಯಾವೊಬ್ಬ ವ್ಯಕ್ತಿ ಅಲ್ಲಿ ಓಡಾಡದಿರುವುದು ಗೊತ್ತಾಗಿದೆ. ಅನುಮಾನ ಬಂದ ಪೊಲೀಸರು ಮನೆಯವರನ್ನು ವಿಚಾರಣೆ ನಡೆಸಿದಾಗ ಆರೋಪಿ ಸಹೋದರಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಎಸ್​ಪಿ ಕುಮಾರ್​ ತಿಳಿಸಿದರು.

ಸದ್ಯ ಆರೋಪಿ ಸಹೋದರಿಯನ್ನು ಬಂಧಿಸಲಾಗಿದ್ದು, ಬಾಲಾಪರಾಧಿ ಕೇಂದ್ರದಲ್ಲಿ ಇರಿಸಲಾಗಿದೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img