Tuesday, May 11, 2021
Homeಸುದ್ದಿ ಜಾಲನೈಜೀರಿಯಾ ಮೂಲದ ನಾಲ್ವರು ಡ್ರಗ್ ಪೆಡ್ಲರ್ಸ್ ಬಂಧನ

ಇದೀಗ ಬಂದ ಸುದ್ದಿ

ನೈಜೀರಿಯಾ ಮೂಲದ ನಾಲ್ವರು ಡ್ರಗ್ ಪೆಡ್ಲರ್ಸ್ ಬಂಧನ

ಬೆಂಗಳೂರು, ಏ. 15: ಬೆಂಗಳೂರಿನಲ್ಲಿ ಮಾದಕ ಲೋಕ ಮತ್ತಷ್ಟು ಸಕ್ರಿಯವಾಗಿದೆ. ಸಿಸಿಬಿ ಪೊಲೀಸರು ಸರಣಿ ಪ್ರಕರಣ ದಾಖಲಿಸುತ್ತಿದ್ದರೂ ಡ್ರಗ್ ಡೀಲಿಂಗ್ ಜಾಲ ಮಾತ್ರ ಮತ್ತಷ್ಟು ಹಬ್ಬಿದಂತಿದೆ. ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಎಕ್ಸೆಟೆಸಿ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ನಾಲ್ವರು ಡ್ರಗ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅಜಾ ಒವೈಸಿ, ಚಾರ್ಲ್ಸ್ ಚಿಮಾ, ಮಲಂಗ್ ಪಾಷಾ, ಜಾಸೀರ್ ಬಂಧಿತರು. ಇವರಿಂದ 24 ಲಕ್ಷ ರೂ. ಮೌಲ್ಯದ ಡ್ರಗ್ ಹಾಗೂ ಮಾರಕಾಸ್ತ್ರಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಜತೆಗೆ ಎರಡು ಬೈಕ್ ಹಾಗೂ ನಾಲ್ಕು ಸಾವಿರ ರೂ. ನಗದು ಹಣ ಪತ್ತೆಯಾಗಿದೆ.

ನೈಜೀರಿಯಾ ಮೂಲದ ಬಂಧಿತರು ಬಾಗಲೂರು ಪೊಲೀಸ್ ಠಾಣೆಯ ಶಾಲೆಯ ಸಮೀಪ ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದು, ಇವರ ದಂಧೆಗೆ ಅಡ್ಡಿಪಡಿಸುವವರ ವಿರುದ್ಧ ದಾಳಿ ಮಾಡಲು ಮಾರಕಾಸ್ತ್ರಗಳನ್ನು ಹೊಂದಿರುವ ಸಂಗತಿ ಗೊತ್ತಾಗಿದೆ. ಆರೋಪಿಗಳ ವಿರುದ್ಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img