Monday, May 10, 2021
Homeರಾಜ್ಯಹೆಣದ ಮೇಲೆ ಹಣ ವಸೂಲಿ ಮಾಡಿದ್ರೆ ಕ್ರಿಮಿನಲ್‌ ಕೇಸ್ :‌ ಡಾ. ಕೆ. ಸುಧಾಕರ್‌

ಇದೀಗ ಬಂದ ಸುದ್ದಿ

ಹೆಣದ ಮೇಲೆ ಹಣ ವಸೂಲಿ ಮಾಡಿದ್ರೆ ಕ್ರಿಮಿನಲ್‌ ಕೇಸ್ :‌ ಡಾ. ಕೆ. ಸುಧಾಕರ್‌

ಬೆಂಗಳೂರು: ಕೋವಿಡ್‌ -19ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಸಾಗಿಸುವ ವೇಳೆ ಖಾಸಗಿ ಆಂಬುನೆಲ್ಸ್‌ʼಗಳು ಸಾಕಷ್ಟು ಹಣ ವಸೂಲಿ ಮಾಡ್ತೀವೆ ಅನ್ನೋ ಆರೋಪಗಳು ಕೇಳಿ ಬರ್ತಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ ಖಾಸಗಿ ಆಂಬುಲೆನ್ಸ್‌ನರು ಹಣ ವಸೂಲಿ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ. ಹೆಣದ ಮೇಲೆ ಶೋಷಣೆ ಮಾಡುವುದು ಸರಿಯಲ್ಲ. ಖಂಡಿತವಾಗಿಯೂ ಅಂತಹವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳುತ್ತೇವೆ. ಯಾರು ಕೂಡ ಇಂತಹ ಕೆಲ್ಸ ಮಾಡಬಾರ್ದು. ಈ ಸಮಯದಲ್ಲಿ ಅಮಾನವೀಯ ನಡುವಳಿಕೆ ಸರಿಯಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಸಿದ ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತಾ, ‘ಹಿಂದಿನ ಆದೇಶ ಪಾಲನೆ ಮಾಡುವಂತೆ ಸೂಚನೆ ನೀಡಿದ್ದೇವೆ. ಈ ಆದೇಶದಂತೆ, ಚಟ್ಟಕ್ಕೆ 300 ರೂಪಾಯಿ, ಅಸ್ಥಿ ಕೊಡುವ ಮಡಿಕೆಗೆ 50 ರೂಪಾಯಿ, ಈ 350 ರೂಪಾಯಿ ಬಿಬಿಎಂಪಿಯಿಂದ ನೀಡಲಾಗುವುದು. ಇನ್ನು‌ ಮೃತರ ಸಂಬಂಧಿಕರಿಂದ 250 ರೂಪಾಯಿ ಪಡೆಯಬೇಕು’ ಎಂದು ಸ್ಪಷ್ಟೀಪಡಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img