Tuesday, May 11, 2021
Homeಸುದ್ದಿ ಜಾಲಮಾಸ್ಕ್ ಧರಿಸದ ಪೊಲೀಸ್ ಸಿಬ್ಬಂದಿಗೆ ಬಿತ್ತು 2000 ರೂ. ದಂಡ

ಇದೀಗ ಬಂದ ಸುದ್ದಿ

ಮಾಸ್ಕ್ ಧರಿಸದ ಪೊಲೀಸ್ ಸಿಬ್ಬಂದಿಗೆ ಬಿತ್ತು 2000 ರೂ. ದಂಡ

ಮಾಸ್ಕ್​​ ಹಾಕಿಲ್ಲ ಅಂತಾ ಪೊಲೀಸರು ಸಾರ್ವಜನಿಕರಿಗೆ ದಂಡ ಹಾಕೋದನ್ನ ಕೇಳಿರ್ತೇವೆ. ಆದರೆ ಓಡಿಶಾದಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಠಾಣೆ ಪೊಲೀಸ್​ ಕಾನ್​ಸ್ಟೇಬಲ್​ ಮಾಸ್ಕ್​ ಹಾಕದ್ದಕ್ಕೆ 2000 ರೂಪಾಯಿಯನ್ನ ದಂಡದ ರೂಪದಲ್ಲಿ ಪಾವತಿಸಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಪುರಿ ಎಸ್​ಪಿ ಡಾ. ಕನ್ವರ್​ ವಿಶಾಲ್​ ಸಿಂಗ್​, ಮಾಸ್ಕ್​ ಧರಿಸದ ಕಾರಣಕ್ಕೆ ಪೇದೆಗೆ 2000 ರೂಪಾಯಿ ದಂಡವನ್ನ ವಿಧಿಸಲಾಗಿದೆ. ಜವಾಬ್ದಾರಿಯುತ ನಾಗರಿಕರಾಗಿ ಆ ಪೇದೆ ದಂಡದ ಹಣವನ್ನ ಭರಿಸಿದ್ದಾರೆ. ನಮಗೆ ಜನರ ಆರೋಗ್ಯ ಮುಖ್ಯವಾಗಿದ್ದು ಈ ವಿಚಾರದಲ್ಲಿ ಯಾರಿಗೂ ವಿನಾಯಿತಿ ನೀಡುವ ಮಾತೇ ಇಲ್ಲ. ಮಾಸ್ಕ್​ನ್ನು ಎಂದಿಗೂ ಧರಿಸಿ ಇಲ್ಲವಾದಲ್ಲಿ ದಂಡವನ್ನ ಭರಿಸಿ ಎಂದು ಹೇಳಿದ್ದಾರೆ.

ಕೊರೊನಾ ಲಸಿಕೆ ಡ್ರೈವ್​ ಆರಂಭವಾದಾಗಿನಿಂದ ಇಲ್ಲಿಯವರೆಗೆ ಪುರಿ ಜಿಲ್ಲೆಯಲ್ಲಿ 5923 ಮಂದಿಗೆ ದಂಡ ವಿಧಿಸಲಾಗಿದೆ ಎಂದು ಸಿಂಗ್​ ಹೇಳಿದ್ರು. ಓಡಿಶಾ ಸಿಎಂ ನವೀನ್​ ಪಟ್ನಾಯಕ್​​ ಶುಕ್ರವಾರ 14 ದಿನಗಳ ಮಾಸ್ಕ್​ ಅಭಿಯಾನಕ್ಕೆ ಚಾಲನೆ ನೀಡಿದ್ದರು. ರಾಜ್ಯದಲ್ಲಿ ಕೊರೊನಾ ಕೇಸ್​ ಹೆಚ್ಚುತ್ತಿರುವ ಹಿನ್ನೆಲೆ ಈ ಅಭಿಯಾನವನ್ನ ನಡೆಸಲಾಗ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img