Monday, May 10, 2021
Homeಸುದ್ದಿ ಜಾಲಮಸ್ಕಿಯಲ್ಲಿ ಹಣ ಹಂಚಿಕೆ ಪ್ರಕರಣ: ಪಿಎಸ್‌ಐ ಅಮಾನತಿಗೆ ಡಿ.ಕೆ ಶಿ ಆಗ್ರಹ

ಇದೀಗ ಬಂದ ಸುದ್ದಿ

ಮಸ್ಕಿಯಲ್ಲಿ ಹಣ ಹಂಚಿಕೆ ಪ್ರಕರಣ: ಪಿಎಸ್‌ಐ ಅಮಾನತಿಗೆ ಡಿ.ಕೆ ಶಿ ಆಗ್ರಹ

ಮಸ್ಕಿ (ರಾಯಚೂರು ಜಿಲ್ಲೆ): ‘ಮಸ್ಕಿ ವಿಧಾನಸಭೆ ಕ್ಷೇತ್ರದ ಮಟ್ಟೂರು ಗ್ರಾಮದಲ್ಲಿ ಎರಡು ಚೀಲಗಳಲ್ಲಿ ಹಣ ತಂದು ಮತದಾರರಿಗೆ ಹಂಚುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುದಗಲ್ ಠಾಣೆಯ ಪಿಎಸ್‌ಐ ಡಾಕೇಶ ಅವರನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಒತ್ತಾಯಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮತದಾರರಿಗೆ ಹಣ ಹಂಚುತ್ತಿದ್ದ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಹಿಡಿದಿದ್ದಾರೆ. ಆದರೆ, ಅಲ್ಲಿದ್ದ ಸಬ್ ಇನ್‌ಸ್ಪೆಕ್ಟರ್ ಡಾಕೇಶ ಒಂದು ಚೀಲ ಹಣವನ್ನು ಬಿಜೆಪಿ ಕಾರ್ಯಕರ್ತರ ಜೊತೆ ವಾಪಾಸು ಕಳಿಸಿದ್ದಾರೆ. ಮತ್ತೊಂದು ಚೀಲ ಹಣವನ್ನು ಚುನಾವಣಾಧಿಕಾರಿ ತೆಗೆದುಕೊಂಡು ಬಂದಿದ್ದಾರೆ. ಈ ಬಗ್ಗೆ ನಮ್ಮ ಕಾರ್ಯಕರ್ತ ವಿಡಿಯೊ ಮಾಡಿದ್ದನ್ನು, ಬೆದರಿಸಿ ಡಿಲೀಟ್ ಮಾಡುವ ಮೂಲಕ ಸಾಕ್ಷಿ ನಾಶಪಡಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img