Monday, May 10, 2021
Homeಕೋವಿಡ್-19ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 14,738 ಜನರಿಗೆ ಕೊರೋನಾ, 66 ಸೋಂಕಿತರು ಬಲಿ

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 14,738 ಜನರಿಗೆ ಕೊರೋನಾ, 66 ಸೋಂಕಿತರು ಬಲಿ

 ಬೆಂಗಳೂರು : ರಾಜ್ಯದಲ್ಲಿ ಇಂದು ಕೊರೋನಾ ಮಹಾ ಸ್ಪೋಟವೇ ಉಂಟಾಗಿದೆ. ಇಂದು ಕಳೆದ 24 ಗಂಟೆಯಲ್ಲಿ 14,738 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದ್ದರೇ, ಕಿಲ್ಲರ್ ಕೊರೋನಾಗೆ 66 ಸೋಂಕಿತರು ಬಲಿಯಾಗಿದ್ದಾರೆ.

ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 10,497 ಸೇರಿದಂತೆ ರಾಜ್ಯಾಧ್ಯಂತ 14,738 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 11,09,650ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 3,591 ಜನರು ಸೇರಿದಂತೆ ಇದುವರೆದೆ 9,99,958 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 96,561 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.

ಇನ್ನೂ ಇಂದು ಬಳ್ಳಾರಿಯಲ್ಲಿ ಆರು ಸೋಂಕಿತರು, ಬೆಳಗಾವಿಯಲ್ಲಿ ಒಬ್ಬರು, ಬೆಂಗಳೂರು ನಗರದಲ್ಲಿ 30 ಸೋಂಕಿತರು, ಬೀದರ್ ನಲ್ಲಿ ಇಬ್ಬರು, ಧಾರವಾಡದಲ್ಲಿ ಮೂವರು, ಹಾಸನದಲ್ಲಿ ನಾಲ್ವರು, ಕಲಬುರ್ಗಿ, ಕೋಲಾರದಲ್ಲಿ ಓರ್ವ, ಮೈಸೂರಿನಲ್ಲಿ ಐವರು, ರಾಮನಗರ, ಶಿವಮೊಗ್ಗ ತಲಾ ಒಬ್ಬರು, ತುಮಕೂರು, ಉತ್ತರ ಕನ್ನಡದಲ್ಲಿ ತಲಾ ಇಬ್ಬರು ಮತ್ತು ವಿಜಯಪುರದಲ್ಲಿ ಒಬ್ಬರು ಸೇರಿದಂತೆ 66 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಹೀಗಾಗಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 13,112ಕ್ಕೆ ಏರಿಕೆಯಾಗಿರುವುದಾಗಿ ತಿಳಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img