Tuesday, May 11, 2021
Homeಸುದ್ದಿ ಜಾಲದೇಶದ ಯಾವ ರಾಜ್ಯಗಳಲ್ಲೂ ʼಲಸಿಕೆ ಕೊರತೆʼ ಇಲ್ಲ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್

ಇದೀಗ ಬಂದ ಸುದ್ದಿ

ದೇಶದ ಯಾವ ರಾಜ್ಯಗಳಲ್ಲೂ ʼಲಸಿಕೆ ಕೊರತೆʼ ಇಲ್ಲ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್

 ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ಲಸಿಕೆಯ ಕೊರತೆಯಾಗಿದೆ ಅನ್ನೋ ಆರೋಪಗಳು ಕೇಳಿ ಬರ್ತಿರೋ ಹಿನ್ನೆಲೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ ಕೇಂದ್ರ ಆರೋಗ್ಯ ಹರ್ಷವರ್ಧನ್‌, ದೇಶದಲ್ಲಿ ಕೊರೊನಾ ಲಸಿಕೆಯ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೇಶದ ಯಾವ ರಾಜ್ಯದಲ್ಲೂ ಲಸಿಕೆಗಳ ಕೊರತೆಯಿಲ್ಲ ಎಂದಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ‘ಭಾರತ ಸರ್ಕಾರವು ಪ್ರತಿಯೊಂದು ರಾಜ್ಯಗಳಿಗೂ ಲಸಿಕೆಗಳನ್ನ ನೀಡುತ್ತಿದೆ. ಇದನ್ನು ಕಾಲಮಿತಿಯಲ್ಲಿ ರೋಗನಿರೋಧಕ ಕೇಂದ್ರಗಳಿಗೆ ಪೂರೈಸುವುದು ರಾಜ್ಯಗಳ ಕೆಲಸ’ ಎಂದರು.

ಲಸಿಕೆಗಳ ಕೊರತೆಯನ್ನ ಪರಿಹರಿಸುವಂತೆ ಹಲವಾರು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ. ಕೇಂದ್ರವು ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ವಿಶೇಷವಾಗಿ ಪರೋಕ್ಷ ತಾರತಮ್ಯವನ್ನ ಮಾಡ್ತಿವೆ ಎಂದು ಆರೋಪ ಕೇಳಿ ಬಂದಿತ್ತು.

ರಾಜ್ಯಗಳು ಲಸಿಕೆಯ ಕೊರತೆ ಇದೆ ಎಂದು ಆರೋಪಿಸಿವೆ..!
ಮಹಾರಾಷ್ಟ್ರ, ಛತ್ತೀಸ್ ಗಢ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಒಡಿಶಾಲಸಿಕೆ ಪೂರೈಕೆಯ ಕೊರತೆ ಇದೆ ಎಂದು ಆರೋಪಿಸಿವೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರಿಗೆ ಪತ್ರ ಬರೆದಿದ್ದರು. ಲಸಿಕೆಯ ಕೊರತೆಯಿಂದಾಗಿ 700 ಲಸಿಕೆ ಕೇಂದ್ರಗಳನ್ನ ಮುಚ್ಚಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. 25 ಲಕ್ಷ ಡೋಸ್ ಲಸಿಕೆಯನ್ನ 10 ದಿನಗಳವರೆಗೆ ನೆನೆಸುವಂತೆ ಅವರು ಕೇಂದ್ರವನ್ನ ಒತ್ತಾಯಿಸಿದ್ದರು. ಆದ್ರೆ,, ಲಸಿಕೆಗಳ ಕೊರತೆಯನ್ನ ಕೇಂದ್ರ ಸರ್ಕಾರ ಸಂಪೂರ್ಣವಾಗಿ ತಳ್ಳಿಹಾಕಿದೆ. ಕೆಲವು ರಾಜ್ಯಗಳು ಈ ಬಗ್ಗೆ ಚರ್ಚಿಸುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದರು. ಲಸಿಕೆಯ ಕೊರತೆಯ ಬಗ್ಗೆ ಮಾತನಾಡುತ್ತಾ, ಅವರು ಅನಗತ್ಯವಾಗಿ ಜನರಲ್ಲಿ ವದಂತಿಗಳನ್ನು ಹರಡುತ್ತಿದ್ದಾರೆ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img