Monday, May 10, 2021
Homeಸುದ್ದಿ ಜಾಲಬೆಳಗಾವಿ ಉಪಚುನಾವಣಾ ಅಖಾಡಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಎಂಟ್ರಿ

ಇದೀಗ ಬಂದ ಸುದ್ದಿ

ಬೆಳಗಾವಿ ಉಪಚುನಾವಣಾ ಅಖಾಡಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಎಂಟ್ರಿ

ಬೆಳಗಾವಿ: ಜಿಲ್ಲೆಯಲ್ಲಿ ಉಪಚುನಾವಣಾ ಕಣ ಮತ್ತಷ್ಟು ರಂಗೇರಿದ್ದು, ಇಂದು ಗೋಕಾಕ್ ಮತ್ತು ಅರಭಾಂವಿ ಕ್ಷೇತ್ರದಲ್ಲಿ ಸಿಎಂ ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿ ಪರ​ ಮತ ಪ್ರಚಾರ ನಡೆಸಲಿದ್ದಾರೆ.

ಎರಡು ದಿನ ಬೆಳಗಾವಿ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪ ಅವರೊಂದಿದೆ, ಪಕ್ಷದ ಹಿರಿಯ ನಾಯಕರು ಸಹ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.

ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಪರ ಸಿಎಂ ಮತಬೇಟೆ ನಡೆಸಲಿದ್ದು, ಅರಭಾಂವಿ ಕ್ಷೇತ್ರದಲ್ಲಿ ಕೆಎಂಡಿಎಫ್​ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಾಥ್ ನೀಡಲಿದ್ದಾರೆ. ಅಲ್ಲದೇ ನಾಳೆ ಗೋಕಾಕ್​ ನಗರದಲ್ಲೂ ಬಿಜೆಪಿ ಬೃಹತ್​ ರೋಡ್ ಶೋ ನಡೆಯಲಿದ್ದು, ವಿಶೇಷವಾಗಿ ಮರಾಠ, ಲಿಂಗಾಯತ ಮತಗಳನ್ನ ಕೇಂದ್ರವಾಗಿಟ್ಟುಕೊಂಡು ಯಡಿಯೂರಪ್ಪ ಮತ ಪ್ರಚಾರ ಕಾರ್ಯ ನಡೆಸಲಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img