Monday, May 10, 2021
Homeಅಂತರ್ ರಾಜ್ಯರಾಜಸ್ಥಾನ : ಆಸ್ಪತ್ರೆಯಿಂದ 320 ಡೋಸ್ ಕೋವಿಡ್ ಲಸಿಕೆ ಕಳ್ಳತನ

ಇದೀಗ ಬಂದ ಸುದ್ದಿ

ರಾಜಸ್ಥಾನ : ಆಸ್ಪತ್ರೆಯಿಂದ 320 ಡೋಸ್ ಕೋವಿಡ್ ಲಸಿಕೆ ಕಳ್ಳತನ

  

 ಜೈಪುರ, ಏ. 14: ರಾಜಸ್ಥಾನದ ರಾಜಧಾನಿ ಜೈಪುರದ ಆಸ್ಪತ್ರೆಯಿಂದ 320 ಡೋಸ್‌ಗಳಷ್ಟು ಕೋವಿಡ್ ಲಸಿಕೆಯ ಬ್ಯಾಚ್‌ ಒಂದನ್ನು ಕಳ್ಳತನ ಮಾಡಲಾಗಿದೆ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯ 32 ಬಾಟಲಿಗಳನ್ನು ಲಸಿಕೆ ಕೇಂದ್ರದ ಶೀತಲ ಸಂಗ್ರಹದಿಂದ ಕದಿಯಲಾಗಿದೆ.

ಕೋವ್ಯಾಕ್ಸಿನ್ ಲಸಿಕೆಯ ಒಂದು ಬಾಟಲಿಯಲ್ಲಿ 10 ಡೋಸ್ ಇರುತ್ತದೆ. ಒಟ್ಟು 32 ಬಾಟಲಿಗಳಲ್ಲಿ 320 ಡೋಸ್ ಲಸಿಕೆ ಇರುತ್ತದೆ. ಜೈಪುರದ ಶಾಸ್ತ್ರಿನಗರದ ಕನ್ವಾಟಿಯಾ ಆಸ್ಪತ್ರೆಯಿಂದ ಲಸಿಕೆಗಳ ಕಳ್ಳತನ ನಡೆದಿದೆ. ಲಸಿಕೆಗಳ ಸಾಗಣೆ ಸಂದರ್ಭದಲ್ಲಿ ಈ ಕಳವು ನಡೆದಿದೆ ಎನ್ನಲಾಗಿದೆ.

ಈ ಸಂಬಂಧ ಆಸ್ಪತ್ರೆಯ ಮೇಲ್ವಿಚಾರಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೇಶದ ಅನೇಕ ರಾಜ್ಯಗಳಲ್ಲಿ ಬೇಡಿಕೆಗೆ ತಕ್ಕಷ್ಟು ಲಸಿಕೆ ಲಭ್ಯವಾಗದೆ ಕೊರತೆ ಉಂಟಾಗಿದೆ ಎಂಬ ಕೂಗು ಕೇಳಿಬಂದಿರುವ ಸಂದರ್ಭದಲ್ಲಿಯೇ ಕಳ್ಳತನದಂತಹ ಪ್ರಕರಣಗಳು ಸಹ ಶುರುವಾಗಿವೆ.

‘ಆಸ್ಪತ್ರೆಯಿಂದ 320 ಡೋಸ್‌ನಷ್ಟು ಲಸಿಕೆ ನಾಪತ್ತೆಯಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸುವಂತೆ ಕೋರಿದ್ದೇವೆ’ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ನರೋತ್ತಮ್ ಶರ್ಮಾ ತಿಳಿಸಿದ್ದಾರೆ. ‘ಆಸ್ಪತ್ರೆಯಿಂದ 320 ಡೋಸ್ ಲಸಿಕೆ ಕಣ್ಮರೆಯಾಗಿದೆ ಎಂಬ ಸುದ್ದಿ ನಮಗೆ ಆಘಾತ ಮೂಡಿಸಿದೆ’ ಎಂದು ಆಸ್ಪತ್ರೆ ಹೇಳಿಕೆ ನೀಡಿದೆ.

ರಾಜ್ಯದಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮಗಳನ್ನು ನಡೆಸಲು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹ ಉಳಿದಿಲ್ಲ. ಲಸಿಕೆ ಕೊರತೆ ಉಂಟಾಗುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಳೆದ ವಾರ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು.

ಮಹಾರಾಷ್ಟ್ರದ ಬಳಿಕ 10 ಮಿಲಿಯನ್‌ಗೂ ಅಧಿಕ ಡೋಸ್‌ಗಳನ್ನು ನೀಡಿದ ಎರಡನೆಯ ರಾಜ್ಯ ಎಂದೆನಿಸಿಕೊಂಡಿರುವ ರಾಜಸ್ಥಾನದಲ್ಲಿ ಅಗತ್ಯ ಇರುವಷ್ಟು ಲಸಿಕೆಗಳನ್ನು ಕೇಂದ್ರ ಸರ್ಕಾರ ಕಳುಹಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img