Tuesday, May 11, 2021
Homeಸುದ್ದಿ ಜಾಲಚತ್ತೀಸ್ ಗಢ: ಕೇಂದ್ರದ ಉಸ್ತುವಾರಿ ವೈದ್ಯ ಕೊರೋನಾ ಸೋಂಕಿನಿಂದ ಸಾವು!

ಇದೀಗ ಬಂದ ಸುದ್ದಿ

ಚತ್ತೀಸ್ ಗಢ: ಕೇಂದ್ರದ ಉಸ್ತುವಾರಿ ವೈದ್ಯ ಕೊರೋನಾ ಸೋಂಕಿನಿಂದ ಸಾವು!

ರಾಯ್ ಪುರಚತ್ತೀಸ್ ಗಢದ ಕೋವಿಡ್-19 ನಿಯಂತ್ರಣ ಹಾಗೂ ಕಮಾಂಡ್ ಕೇಂದ್ರ, ಹಿರಿಯ ವೈದ್ಯ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಡಾ. ಸುಭಾಷ್ ಪಾಂಡೆ (65) ಮೃತ ವೈದ್ಯರಾಗಿದ್ದು, ಈಗಾಗಲೇ ಕೊರೋನಾ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದಿದ್ದರು. ಅವರ ಸಹೋದ್ಯೋಗಿಗಳು ನೀಡಿರುವ ಮಾಹಿತಿಯ ಪ್ರಕಾರ ಡಾ. ಸುಭಾಷ್ ಪಾಂಡೆ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ಪಾಂಡೆ, ರಾಜ್ಯದಲ್ಲಿ ಕೋವಿಡ್-19 ಪರಿಸ್ಥಿತಿ ಹಾಗೂ ಅದನ್ನು ಎದುರಿಸಲು ಇರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲು ಸರ್ಕಾರದ ವಕ್ತಾರರ ಜವಾಬ್ದಾರಿಯನ್ನೂ ನೀಡಲಾಗಿತ್ತು.

ಜ್ವರ ಹಾಗೂ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಪಾಂಡೆ ಅವರನ್ನು ಏಮ್ಸ್ ಗೆ ದಾಖಲಿಸಲಾಗಿತ್ತು. ಮಂಗಳವಾರದಂದು ಸಂಜೆ ಅವರ ಸ್ಥಿತಿ ಹದಗೆಟ್ಟ ಪರಿಣಾಮ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img