Tuesday, May 18, 2021
Homeಸುದ್ದಿ ಜಾಲಬೆಂಗಳೂರಿನಲ್ಲಿ ಹತ್ತು ಹೊಸ ಕೊರೊನಾ ಸೆಂಟರ್ ಓಪನ್ : ಸಿಎಂ ಬಿಎಸ್ ಯಡಿಯೂರಪ್ಪ

ಇದೀಗ ಬಂದ ಸುದ್ದಿ

ಬೆಂಗಳೂರಿನಲ್ಲಿ ಹತ್ತು ಹೊಸ ಕೊರೊನಾ ಸೆಂಟರ್ ಓಪನ್ : ಸಿಎಂ ಬಿಎಸ್ ಯಡಿಯೂರಪ್ಪ

ಬೆಂಗಳೂರಿನಲ್ಲಿ ಹತ್ತು ಹೊಸ ಕೋವಿಡ್​ ಸೆಂಟರ್ ತೆರೆಯಲು ತೀರ್ಮಾನಿಸಿದ್ದೇವೆ. ಎಲ್ಲ ಹೊಸ ಕೋವಿಡ್ ಸೆಂಟರ್​ನಲ್ಲಿ 1,500 ಬೆಡ್ ವ್ಯವಸ್ಥೆ ಮಾಡುತ್ತಿದ್ಧೇವೆ. ಬೆಂಗಳೂರು ಕೇಂದ್ರಿಕರಿಸಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ.

ಬೆಳಗಾವಿಯಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಲೋಕಸಭೆ ಉಪಚುನಾವಣೆ ಪ್ರಚಾರದ ಸಲುವಾಗಿ ಇವತ್ತು ಗೋಕಾಕ್​, ಅರಬಾಂವಿಗೆ ಹೊರಟಿದ್ದೇನೆ. ಜಾರಕಿಹೊಳಿ‌ ಸಹೋದರರು ಸಹಕಾರ ನೀಡುತ್ತಿದ್ದಾರೆ. 4 ಲಕ್ಷ ಹೆಚ್ಚು ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ದಾಖಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಕೊರೊನಾ ಟಫ್ ರೂಲ್ಸ್ ಬಗ್ಗೆ ಸರ್ವಪಕ್ಷ ಸಭೆಯ ಬಳಿಕವಷ್ಟೇ ತೀರ್ಮಾನಿಸುತ್ತೇವೆ. ಸರ್ವಪಕ್ಷ ನಾಯಕರು ಸಭೆಗೆ ಬಂದಾಗ ಚರ್ಚೆ ಮಾಡುತ್ತೇನೆ. ಆದರೆ, ಕೊರೊನಾ ಸೋಂಕು ತಡೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಸಿಎಂ ಬಿಎಸ್​ವೈ ಅವರು ಮಾತನಾಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img