Thursday, July 29, 2021
Homeಸುದ್ದಿ ಜಾಲಸಾರಿಗೆ ನೌಕರರನ್ನು ಬೆದರಿಸ್ತಿನಿ ಅಂದ್ರೆ ಅದು ಮೂರ್ಖತನ : ಮಾಜಿ ಸಿಎಂ ಸಿದ್ದರಾಮಯ್ಯ

ಇದೀಗ ಬಂದ ಸುದ್ದಿ

ಸಾರಿಗೆ ನೌಕರರನ್ನು ಬೆದರಿಸ್ತಿನಿ ಅಂದ್ರೆ ಅದು ಮೂರ್ಖತನ : ಮಾಜಿ ಸಿಎಂ ಸಿದ್ದರಾಮಯ್ಯ

ಸರ್ಕಾರ ನೌಕರರನ್ನು ಕರೆದು ಮಾತನಾಡಬೇಕು. ಪ್ರತಿಷ್ಠೆಯನ್ನು ವಿಚಾರವನ್ನು ಸರ್ಕಾರ ಬಿಡಬೇಕು. ಸರ್ಕಾರ ನಡೆಸುವರು ಕರೆಸಿ ಮಾತನಾಡಬೇಕು. ಮುಷ್ಕರ ನಿರತರ ಮನವೊಲಿಸಬೇಕು. ಹೆದರಿಸಿ, ಬೆದರಿಸ್ತಿನಿ ಅಂದ್ರೆ ಅದು ಮುರ್ಖತನ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ‌ಪ್ರಚಾರ ಮಾಡಿ ಬಂದಿದ್ದೇನೆ. ಮೂರು ಕಡೆ ಕಾಂಗ್ರೆಸ್ ಪರ ಅಲೆಯಿದೆ. ಮೂರು ಕ್ಷೇತ್ರಗಳನ್ನ ನಾವು ಗೆಲ್ಲುತ್ತೇವೆ. ಬಿಜೆಪಿಗೆ ಜನಾಭಿಪ್ರಾಯವಿಲ್ಲ ಹಾಗಾಗಿ ದುಡ್ಡು ಕೊಟ್ಟು ಕೊಂಡುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನು ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ ಎನ್ನುವುದರ ಕುರಿತು ಮಾತನಾಡಿದ ಸಿದ್ದರಾಮಯ್ಯ ಇದು ಸರ್ಕಾರದ ಫೆಲ್ಯೂರ್, ಹೊರಗಡೆಯಿಂದ ಬಂದವರನ್ನ ಟೆಸ್ಟ್ ಮಾಡಲಿಲ್ಲ. ಸರಿಯಾಗಿ ಟೆಸ್ಟ್ ಮಾಡೋದನ್ನ ನಿಲ್ಲಿಸಿಬಿಟ್ರು. ಜಾತ್ರೆ, ಸಮಾರಂಭಗಳನ್ನ ಸರಿಯಾಗಿ ನಿಯಂತ್ರಣ ಮಾಡಲಿಲ್ಲ. ಚುನಾವಣಾ ಪ್ರಚಾರ ಮಾಡಿದ್ರು. ಪ್ರಚಾರಕ್ಕೂ ನಿಯಂತ್ರಣ ಹಾಕಬೇಕಿತ್ತು. ಅವರು ಫಾಲೋ ಮಾಡಿದ್ರೆ, ನಾವು ಫಾಲೋ ಮಾಡ್ತಿದ್ವಿ. ಇದಕ್ಕೆಲ್ಲಾ ಸರ್ಕಾರವೇ ಹೊಣೆ ಎಂದು ವಾಗ್ದಾಳಿ ನಡೆಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img