Thursday, July 29, 2021
Homeಜಿಲ್ಲೆಕಲಬುರ್ಗಿಕಲಬುರಗಿ : ರಸ್ತೆಗಿಳಿದ ಬಸ್ ಮೇಲೆ ಮೂವರು ಪ್ರತಿಭಟನಾನಿರತ ಚಾಲಕರಿಂದ ಕಲ್ಲು ತೂರಾಟ

ಇದೀಗ ಬಂದ ಸುದ್ದಿ

ಕಲಬುರಗಿ : ರಸ್ತೆಗಿಳಿದ ಬಸ್ ಮೇಲೆ ಮೂವರು ಪ್ರತಿಭಟನಾನಿರತ ಚಾಲಕರಿಂದ ಕಲ್ಲು ತೂರಾಟ

ಕಲಬುರಗಿ : ಸಾರಿಗೆ ನೌಕರರ ಮುಷ್ಕರ ನಡುವೆ ರಸ್ತೆಗಿಳಿದಿದ್ದ ಬಸ್‌ಗಳ ಮೇಲೆ ಮೂವರು ಪ್ರತಿಭಟನಾನಿರತ ಚಾಲಕರು ಕಲ್ಲು ತೂರಿ ಬಸ್ ಜಖಂಗೊಳಿಸಿರುವ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಹೊರವಲಯದ ಬಲರಾಮ ಚೌಕ್ ಬಳಿ ನಡೆದಿದೆ.

ಕಲಬುರಗಿ ಡಿಪೋಗೆ ಸೇರಿದ ಬಸ್ ಕಲಬುರಗಿಯಿಂದ – ವಾಡಿ ಮಾರ್ಗವಾಗಿ ಯಾದಗಿರಕ್ಕೆ ಹೊರಟಿದ್ದ ವೇಳೆ ಕಲ್ಲು ತೂರಾಟ ನಡೆಸಿದ್ದರು. ಸೇಡಂ ಡಿಪೋ ಬಸ್ ಚಾಲಕ ವಿಶ್ವನಾಥ್ ಚೌಹಾಣ್​, ಚಿತ್ತಾಪುರ ಡಿಪೋ ಬಸ್ ಚಾಲಕರಾದ ಬಸವರಾಜ್ ಜಾಧವ್ ಹಾಗೂ ಅಶೋಕ್ ಮೇಲಿನಕೇರಿ ಎಂಬುವರು ಬಸ್ ಮೇಲೆ ಕಲ್ಲು ತೂರಿದ ಆರೋಪಿಗಳು. ಅವರನ್ನು ವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಲ್ಲು ತೂರಿದ ಪರಿಣಾಮ ಬಸ್ ಮುಂಭಾಗದ ಗ್ಲಾಸ್ ಪುಡಿಯಾಗಿ ಚಾಲಕನ ಕೈಗೆ ತಗುಲಿತ್ತು. ಇದರಿಂದ ಈ ಬಸ್​ನ ಡ್ರೈವರ್​ ಸಹ ಗಾಯಗೊಂಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img