Saturday, July 31, 2021
Homeಸುದ್ದಿ ಜಾಲಭೀಕರ ರಸ್ತೆ ಅಪಘಾತ : 20 ಮಂದಿ ಸಾವು

ಇದೀಗ ಬಂದ ಸುದ್ದಿ

ಭೀಕರ ರಸ್ತೆ ಅಪಘಾತ : 20 ಮಂದಿ ಸಾವು

ಪೆರು : ಉತ್ತರ ಅನ್ ಕ್ಯಾಶ್ ಪ್ರದೇಶದ ಸಿಹುವಾಸ್ ಪ್ರಾಂತ್ಯದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಹದಿನೆಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ಒಟ್ಟು ಈ ದುರಂತದಲ್ಲಿ ಕನಿಷ್ಠ 20 ಮಂದಿ ಸಾವಿಗೀಡಾಗಿದ್ದು, ಇನ್ನೂ 14 ಜನರು ಗಾಯಗೊಂಡಿದ್ದು , ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ . ಪಾಲೋ ಸೆಕೊ ಪ್ರದೇಶದಲ್ಲಿ ಸೋಮವಾರ ಸ್ಥಳೀಯ ಕಾಲಮಾನ ಬೆಳಗ್ಗೆ 7 ಗಂಟೆ ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ .

ಫಾಮಾ ಟೂರ್ಸ್ ಎಸ್ ಎ ಸಾರಿಗೆ ಕಂಪನಿಯ ಬಸ್ ಸ್ಕಿಡ್ ಆಗಿ ಕಂದಕಕ್ಕೆ ಉರುಳಿಬಿದ್ದಿದೆ . ಭಾನುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿ ಹುವಾಂಚೈಲ್ವೆ ಮತ್ತು ಪರೋಬಾಂಬಾ ಪ್ರದೇಶಗಳಿಂದ ಹಿಂದಿರುಗುದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img