Tuesday, June 15, 2021
Homeಕ್ರೈಂ ನ್ಯೂಸ್ಅಕ್ರಮ ಸಂಬಂಧ ಶಂಕೆ: ನಡುರಸ್ತೆಯಲ್ಲಿ ಪತ್ನಿಗೆ 25 ಬಾರಿ ಇರಿದು ಕೊಂದ ಪತಿ!

ಇದೀಗ ಬಂದ ಸುದ್ದಿ

ಅಕ್ರಮ ಸಂಬಂಧ ಶಂಕೆ: ನಡುರಸ್ತೆಯಲ್ಲಿ ಪತ್ನಿಗೆ 25 ಬಾರಿ ಇರಿದು ಕೊಂದ ಪತಿ!

ನವದೆಹಲಿ: ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಪತಿ ನಡುರಸ್ತೆಯಲ್ಲೇ ಪತ್ನಿಗೆ 25ಕ್ಕೂ ಹೆಚ್ಚು ಬಾರಿ ಇರಿದು ಕೊಂದಿರುವ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದೆಹಲಿಯ ಮಾರುಕಟ್ಟೆಯೊಂದರಲ್ಲಿ ಈ ಕೃತ್ಯ ನಡೆದಿದೆ. ಆರೋಪಿ ಹರೀಶ್ ಮೆಹ್ತಾ ತನ್ನ ಪತ್ನಿ 26 ವರ್ಷದ ನೀಲುಳನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ನೀಲು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು.

ಹರೀಶ್ ಮೆಹ್ತಾ ಪತ್ನಿಗೆ ಇರಿಯುತ್ತಿದ್ದ ವೇಳೆ ಸಾರ್ವಜನಿಕರು ಆಕೆಯನ್ನು ರಕ್ಷಿಸಲು ಮುಂದಾದರು. ಆದರೆ ಈ ವೇಳೆ ಹರೀಶ್ ಮುಂದೆ ಬಂದರ ಮೇಲೆ ಚಾಕು ತೋರಿಸಿ ಹೆದರಿಸಿದ್ದಾನೆ. ಇದರಿಂದ ಅಸಹಾಯಕರಾದ ಸಾರ್ವಜನಿಕರು ಭೀಕರ ದೃಶ್ಯವನ್ನು ನೋಡುತ್ತಾ ನಿಂತಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹರೀಶ್ ಮೆಹ್ತಾನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img