Saturday, April 17, 2021
Home ಜಿಲ್ಲೆ ಬಾಗಲಕೋಟೆ ಕುಸ್ತಿ ಚಾಂಪಿಯನ ಶಿಪ್ ನಲ್ಲಿ ತೃತೀಯ ಸ್ಥಾನ ಪಡೆದ: ರಕ್ಷಿತಾ ಹಳಿಂಗಳಿ

ಇದೀಗ ಬಂದ ಸುದ್ದಿ

ಕುಸ್ತಿ ಚಾಂಪಿಯನ ಶಿಪ್ ನಲ್ಲಿ ತೃತೀಯ ಸ್ಥಾನ ಪಡೆದ: ರಕ್ಷಿತಾ ಹಳಿಂಗಳಿ

ಬಾಗಲಕೋಟೆ  : ರಾಷ್ಟ್ರೀಯ ಬಾಲಕ ಹಾಗೂ ಬಾಲಕಿಯರ ಜೂನಿಯರ ಹಾಗೂ ಸಬ್  ಜೂನಿಯರ್ ಚಾಂಪಿಯನ ಶಿಪ್ ಗೆ  ಕರ್ನಾಟಕ ತಂಡ ಆಯ್ಕೆಯಾಗಿ ಟ್ರಯಲನನ್ನು ಗದಗಿನಲ್ಲಿ  ಮಾರ್ಚ್5 ರಂದು ನಡೆಸಲಾಗಿತ್ತು.

 ಈ ಚಾಂಪಿಯನ ಶಿಪ್ ನಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಬಸವಾ ಎಜುಕೇಶನ್ ಫೌಂಡೇಶನ್ ಮತ್ತು ಡಿ ಕೆ ಕೊಟ್ರಶೆಟ್ಟಿ ಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ರಕ್ಷಿತಾ ಭರತ ಹಳಿಂಗಳಿ 61-kG ಜೂನಿಯರ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ತೃತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಮುಖ್ಯೋಪಾಧ್ಯಾಯ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಕುಸ್ತಿ ತರಬೇತಿದಾರರಾದ ಶ್ರೀ ಆರ್ ಕೆ ಜಿದ್ದಿಮನಿ  ವಿದ್ಯಾರ್ಥಿನಿಗೆ ಅಭಿನಂದಿಸಿದ್ದಾರೆ.

ಪ್ರಕಾಶ ಕುಂಬಾರ

 ದಿ ನ್ಯೂಸ್ 24 ಕನ್ನಡ

 ಬಾಗಲಕೋಟೆ

TRENDING