Saturday, April 17, 2021
Home ರಾಜಕೀಯ ಪಕ್ಷ ಬಯಸಿದ್ರೆ ಮುಖ್ಯಮಂತ್ರಿ ಹುದ್ದೆ ಏರಲು ಸಿದ್ಧ : ಶಾಸಕ ಯತ್ನಾಳ್

ಇದೀಗ ಬಂದ ಸುದ್ದಿ

ಪಕ್ಷ ಬಯಸಿದ್ರೆ ಮುಖ್ಯಮಂತ್ರಿ ಹುದ್ದೆ ಏರಲು ಸಿದ್ಧ : ಶಾಸಕ ಯತ್ನಾಳ್

 

 

 ಬೆಳಗಾವಿ : ಪಕ್ಷ ಬಯಸಿದ್ರೆ ಮುಖ್ಯಮಂತ್ರಿ ಹುದ್ದೆ ಏರಲು ಸಿದ್ಧ, ಅಧಿಕಾರ ಸಿಕ್ಕರೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ಅಧಿಕಾರ ನಡೆಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಸಹ ಪಕ್ಷ ಕಟ್ಟಿದವನು, ಬೆಂಗಳೂರು ಬಿಟ್ಟು ಬರದವರು ಸಿಎಂ ಆಗಿದ್ದಾರೆ. ರಾಜ್ಯದಲ್ಲೂ ಕೆಲಸ ಇಲ್ಲದವರು, ಕೆಎಂಎಫ್ ಡೈರೆಕ್ಟರ್ ಆಗದೇ ಇರೋರು ಸಹ ಸಿಎಂ ಆಗಿದ್ದಾರೆ. ನನಗೂ ಅಧಿಕಾರ ಕೊಟ್ರೆ ಉತ್ತಮ ಆಡಳಿತ ಕೊಡ್ತೀನಿ. ಆಗ ಉತ್ತರ ಪ್ರದೇಶದ ಯೋಗಿ ಸರ್ಕಾರದ ಮಾದರಿಯಲ್ಲಿ ಕರ್ನಾಟಕ ಸರ್ಕಾರ ನಡೆಯುತ್ತೆ ಎಂದರು.

ಇನ್ನು ಏಪ್ರಿಲ್ 30 ರೊಳಗೆ ಕರ್ನಾಟಕ ರಾಜಕೀಯದಲ್ಲಿ ಬದಲಾವಣೆ ಆಗುವ ಸಂಭವ ಇದೆ. ಏಪ್ರಿಲ್ 17 ರ ಮತದಾನದ ಬಳಿಕ ಬದಲಾವಣೆ ಪ್ರಕ್ರಿಯೆ ಆರಂಭ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

 

 

TRENDING