Saturday, April 17, 2021
Home ರಾಜ್ಯ ಮೂರನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ

ಇದೀಗ ಬಂದ ಸುದ್ದಿ

ಮೂರನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ

 ಬೆಂಗಳೂರು : ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸಹ ಯಾವುದೇ ಬಸ್ ಸಂಚಾರ ಕಂಡುಬಂದಿಲ್ಲ. ಹೀಗಾಗಿ ಪ್ರಯಾಣಿಕರು ಬಸ್ ಸಿಗದೇ ಪರದಾಡುವಂತಾಗಿದೆ.

ಮೂರನೇ ದಿನವಾದ ಇಂದು ಕೂಡ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸರ್ಕಾರಿ ಬಸ್ ಗಳನ್ನೇ ನೆಚ್ಚಿಕೊಂಡ ಪ್ರತಿನಿತ್ಯ ಪ್ರಯಾಣಿಸುತ್ತಿದ್ದ ಲಕ್ಷಾಂತರ ಮಂದಿ ಸಾರಿಗೆ ಸೌಲಭ್ಯವಿಲ್ಲದೇ ಪರದಾಡುವಂತಾಗಿದೆ.

ಕೊರೊನಾ ಸೋಂಕಿನ ಎರಡನೇ ಅಲೆ ಭೀತಿ ಹೆಚ್ಚುತ್ತಲೇ ಇದ್ದು, ಹೀಗಾಗಿ ಜನಸಾಮಾನ್ಯರಲ್ಲಿ ಲಾಕ್ ಡೌನ್ ಭೀತಿ ಹುಟ್ಟಿಕೊಂಡಿದ್ದು, ಅನೇಕ ಕೂಲಿ ಕಾರ್ಮಿಕರು ಬೆಂಗಳೂರಿನಿಂದ ಊರಿನ ಕಡೆ ಮುಖ ಮಾಡುತ್ತಿದ್ದಾರೆ. ಆದರೆ, ಊರಿಗೆ ತೆರಳಲು ಬಸ್ ವ್ಯವಸ್ಥೆ ಇಲ್ಲದ ಕಾರಣ ಕಾರ್ಮಿಕರು ಪರದಾಡುತ್ತಿದ್ದಾರೆ.

ಸರ್ಕಾರವು ಕೂಡ ನೌಕರರ ಮೇಲೆ ಒತ್ತಡ ಹೇರುವ ಸಲುವಾಗಿ ತರಬೇತಿ ನಿರತ ಚಾಲಕ, ನಿರ್ವಾಹಕರಿಗೆ ಕೆಲಸ ಮಾಡುವಂತೆ ಸೂಚಿಸಲಾಗಿದೆ. 1484 ತರಬೇತಿ ನಿರತ ಸಿಬ್ಬಂದಿಗೆ ಇಂದು ಬಿಎಂಟಿಸಿ ಡೆಡ್ ಲೈನ್ ನೀಡಿದ್ದು, ನಿನ್ನೆ, ಮೊನ್ನೆ ಗೈರಾಗಿದ್ದಕ್ಕೆ ಸೂಕ್ತ ಕಾರಣ ನೀಡಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದೆ. ಇಂದೂ ಕೂಡ ಗೈರಾದರೆ ತರಬೇತಿಯಿಂದ ಮುಲಾಜಿಲ್ಲದೇ ವಜಾಗೊಳಿಸಲಾಗುವುದು ಎಂದು ಹೇಳಿದೆ ಎನ್ನಲಾಗಿದೆ.

 

TRENDING