Tuesday, April 13, 2021
Home ಜಿಲ್ಲೆ ಬಾಗಲಕೋಟೆ ಬಡವರ ಅಕ್ಕಿಗೆ ಕನ್ನ ಹಾಕಿದ ಕದಿಮರು ಅಂದರ್ : 37 ಅಕ್ಕಿ ಚೀಲವನ್ನು ವಶಪಡಿಸಿಕೊಂಡ ಪೊಲೀಸ್...

ಇದೀಗ ಬಂದ ಸುದ್ದಿ

ಬಡವರ ಅಕ್ಕಿಗೆ ಕನ್ನ ಹಾಕಿದ ಕದಿಮರು ಅಂದರ್ : 37 ಅಕ್ಕಿ ಚೀಲವನ್ನು ವಶಪಡಿಸಿಕೊಂಡ ಪೊಲೀಸ್ ಇಲಾಖೆ

ಬಾಗಲಕೋಟೆ :  ಜಿಲ್ಲೆಯ ರಬಕವಿ ಬನಹಟಿ ತಾಲೂಕಿನ ಬನಹಟ್ಟಿಯ ಪೆಂಡಾರ ಗಲ್ಲಿಯ ಆರೋಪಿ ಇಮಾಮಸಾಬ ನಬೀಸಾಬ ಗುರ್ಲ್ ಹೊಸೂರ ವಯಸ್ಸು 25 ಬನಹಟ್ಟಿ ಯ ತನ್ನ ಮನೆಯಲ್ಲಿ ಸರಕಾರದ ವಿವಿಧ ಯು ವಿವಿಧ ಯೋಜನೆಗಳಿಗೆ ಹಂತ ಬೇಕಾದ ಅಕ್ಕಿಯನ್ನು ಅಕ್ರಮವಾಗಿ  ಸಾಗಾಟ ನಡೆಸುತ್ತಿದ್ದ. ತನ್ನ ಮನೆಯಲ್ಲಿ 37 ಪ್ಲಾಸ್ಟಿಕ್ ಅಕ್ಕಿ  ಚೀಲಗಳು ಸಿಕ್ಕಿದೆ ಮತ್ತು 1705 ಕೆಜಿ. 25. 575 ಅಂದಾಜು ಹಣ ಗುರುತಿಸಲಾಗಿದೆ.

ಅಕ್ರಮವಾಗಿ ಅಕ್ಕಿ ಮಾಡುತ್ತಿದ್ದ ಆರೋಪಿಯನ್ನು  ಬನಹಟ್ಟಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 30 / 2021 ಕಲಂ 3 ರೆ/ ವು 7ಇ ಸಿ 1955 ಪ್ರಕರಣ ಗಳನ್ನು ಹಾಕಿ ಪೊಲೀಸರು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ.

ಒಟ್ಟಾರೆಯಾಗಿ ರಬಕವಿ ಬನಹಟಿ ತಾಲೂಕಿನಲ್ಲಿ ಅಕ್ಕಿ ದಂದೆ  ಬಹಳ ಜೋರಾಗಿ ನಡೆಯುತ್ತಿದೆ. ಅಂತವರನ್ನು ಪೊಲೀಸರು ಹೆಡೆಮುರಿ ಕಟ್ಟಬೇಕಾಗಿದೆ. ಸರ್ಕಾರದ ಅಕ್ಕಿ ಬಡವರಿಗೆ  ಸೇರಬೇಕಾದ  ಅಕ್ಕಿ ಕಳ್ಳರ ಪಾಲಾಗಿ ಪಾಲಾಗುತ್ತಿದೆ ವಿಷಾದದ ಸಂಗತಿ.

ಇದೇ ಸಂದರ್ಭದಲ್ಲಿ ಬನಹಟ್ಟಿ  ಪೊಲೀಸ್ ಠಾಣೆಯ ಪಿಎಸ್ಐ ರವಿಕುಮಾರ ಧರ್ಮಟ್ಟಿ. ಇಎಸ್ಐ ಐ ಬಿ ಮಠಪತಿ. ಆಹಾರ ಇಲಾಖೆ ಅಧಿಕಾರಿಗಳು ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

 ಪ್ರಕಾಶ ಕಂಬಾರ

 ವಿ ನ್ಯೂಸ್ 24 ಕನ್ನಡ

ಬಾಗಲಕೋಟೆ

TRENDING