Tuesday, April 13, 2021
Home ಜಿಲ್ಲೆ ಮೈಸೂರು ಪಾಂಡವಪುರ : ಕೃಷಿಹೊಂಡಕ್ಕೆ ಬಿದ್ದು 3 ಮಕ್ಕಳು ಸಾವು

ಇದೀಗ ಬಂದ ಸುದ್ದಿ

ಪಾಂಡವಪುರ : ಕೃಷಿಹೊಂಡಕ್ಕೆ ಬಿದ್ದು 3 ಮಕ್ಕಳು ಸಾವು

 ಮಂಡ್ಯ: ಕೃಷಿಹೊಂಡದಲ್ಲಿ ಮುಳುಗಿ ಮೂವರು ಮಕ್ಕಳು ಧಾರುಣವಾಗಿ ಸಾವನ್ನಪ್ಪಿದ ಘಟನೆ ಪಾಂಡವಪುರ ತಾಲೂಕು ಬಳ್ಳೇಅತ್ತಿಗುಪ್ಪೆ ಗ್ರಾಮದಲ್ಲಿ ಇಂದು(ಗುರುವಾರ) ಸಂಭವಿಸಿದೆ.

ಮಹದೇವಪ್ಪರ ಎಂಬುವರ ಮಕ್ಕಳಾದ ಚಂದನ್ ಮತ್ತು ಕಾರ್ತಿಕ್, ಮಲ್ಲಿಕಾರ್ಜುನ ಅವರ ಪುತ್ರ ರೀತೇಶ್ ಮೃತ ದುರ್ದೈವಿಗಳು.

 ಶಾಲೆಗೆ ರಜೆ ಇದ್ದಿದ್ದರಿಂದ ಈ ಮೂರು ಮಕ್ಕಳೂ ಬಳ್ಳೇಅತ್ತಿಗುಪ್ಪೆ ಗ್ರಾಮ ಹೊರವಲಯದ ಕೃಷಿಹೊಂಡದಲ್ಲಿ ಈಜಾಟಕ್ಕೆ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ದುರಂತ ಅಂತ್ಯಕಂಡಿದ್ದು, ಮೂರು ಮಕ್ಕಳ ಮೃತದೇಹವನ್ನ ಸಾಲಾಗಿ ಮಲಗಿಸಿದ್ದ ದೃಶ್ಯ ಕಂಡು ನೆರೆದಿದ್ದವರೂ ಕಣ್ಣೀರಾದರು. ಮೃತ ಮಕ್ಕಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪಾಂಡವಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

TRENDING