Tuesday, April 13, 2021
Home ಸುದ್ದಿ ಜಾಲ ನಕ್ಸಲರ ವಶದಲ್ಲಿ ಕೋಬ್ರಾ ಕಮಾಂಡೋ ಯೋಧನ ಬಿಡುಗಡೆ

ಇದೀಗ ಬಂದ ಸುದ್ದಿ

ನಕ್ಸಲರ ವಶದಲ್ಲಿ ಕೋಬ್ರಾ ಕಮಾಂಡೋ ಯೋಧನ ಬಿಡುಗಡೆ

ನವದೆಹಲಿ: ಸುಮಾರು 100 ಗಂಟೆಗೂ ಅಧಿಕ ಕಾಲ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದ ಕೋಬ್ರಾ ಕಮಾಂಡೋ ಯೋಧ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ಮಾವೋವಾದಿ ನಕ್ಸಲೀಯರ ಗುಂಪು ಬಿಡುಗಡೆ ಮಾಡಿರುವುದಾಗಿ ಛತ್ತೀಸ್ ಗಢ ಸರ್ಕಾರ ಗುರುವಾರ(ಏ.8) ಹೇಳಿಕೆ ನೀಡಿದೆ.

ಶನಿವಾರ ಛತ್ತೀಸ್ ಗಢದಲ್ಲಿ ನಡೆದಿದ್ದ ಗುಂಡಿನ ಕಾಳಗದಲ್ಲಿ 22 ಮಂದಿ ಯೋಧರು ಹುತಾತ್ಮರಾಗಿದ್ದರು. ಈ ಸಂದರ್ಭದಲ್ಲಿ ಕೋಬ್ರಾ ಕಮಾಂಡೋ ರಾಕೇಶ್ವರ್ ಸಿಂಗ್ ಅವರನ್ನು ಮಾವೋವಾದಿಗಳು ಅಪಹರಿಸಿದ್ದರು.

TRENDING