Tuesday, April 13, 2021
Home ಸುದ್ದಿ ಜಾಲ ಕಾಗವಾಡ : ಕನಕದಾಸ ಕುರಿ ಸಾಕಾಣಕೆ ಮತ್ತು ಸಹಕಾರ ಸಂಘ ಲೋಕಾರ್ಪಣೆ

ಇದೀಗ ಬಂದ ಸುದ್ದಿ

ಕಾಗವಾಡ : ಕನಕದಾಸ ಕುರಿ ಸಾಕಾಣಕೆ ಮತ್ತು ಸಹಕಾರ ಸಂಘ ಲೋಕಾರ್ಪಣೆ

ಕಾಗವಾಡ: ತಾಲೂಕಿನ ಕೃಷ್ಣಾ ಕಿತ್ತೂರು ಗ್ರಾಮದಲ್ಲಿ ನೂತನವಾಗಿ ಕನಕದಾಸ ಕುರಿ ಸಾಕಾಣಿಕೆ ಮತ್ತು ಸಹಕಾರ ಸಂಘವನ್ನು ಕೌಲಗುಡ್ಡ ಅಮರೇಶ್ವರ ಮಹಾರಾಜರ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಲಾಯಿತು

ಕನಕದಾಸ ಕುರಿ ಸಾಕಾಣಿಕೆ ಮತ್ತು ಸಹಕಾರ ಸಂಘವನ್ನು ಉದ್ದೇಶಿಸಿ ಮಾತನಾಡಿದ ಅಮರೇಶ್ವರ ಮಹಾರಾಜರು ನಮ್ಮ ದೇಶ ಕಾಯಕ ತತ್ವದ ಮೇಲೆ ನಡೆಯಬೇಕು ಎಂದು ಬಸವೇಶ್ವರರು ಹೇಳಿದ್ದಾರೆ ಪ್ರತಿಯೊಬ್ಬ ಮನುಷ್ಯ ತನ್ನ ಜೀವನವನ್ನ ಕಾಯಕ ಮಾಡಿ ಸಾರ್ಥಕ ಮಾಡಿಕೊಳ್ಳಬೇಕು.ಕಾಗವಾಡ ಭಾಗದ ಕುರಿಗಾರರ ಅಭಿವೃದ್ಧಿಗಾಗಿ ಈ ಸಹಕಾರಿ ಸಂಘ ಸ್ಥಾಪನೆ ಮಾಡಲಾಗಿದೆ ಇದರಿಂದ ಅನೇಕ ಕುರಿಗಾಹಿಗಳಿಗೆ ಮತ್ತು ನೇಕಾರರಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸವಲತ್ತುಗಳನ್ನು ಕೊಡಿಸಲು ಇದು ಸಹಕಾರಿಯಾಗಲಿದೆ

ಸರ್ಕಾರದಿಂದ ಬರುವ ಸಬ್ಸಿಡಿಯಲ್ಲಿ ಬರುವ ಸವಲತ್ತುಗಳು ಈಗಿನ ಯುಗದಲ್ಲಿ ಸಿಗಬೇಕಾದರೆ ಮಧ್ಯವರ್ತಿಗಳಿಂದ ಸಿಗದೇ ಇರೋ ಪರಿಸ್ಥಿತಿ ಬಂದೋದಗಿದೆ ಇಂತಹ ಸನ್ನಿವೇಶದಲ್ಲಿ ಅಂತಹ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ಸಂಘ ಕಾರ್ಯನಿರ್ವಹಿಸುತ್ತದೆ ಎಂಬುದು ನಮಗೆ ಖುಷಿಯ ವಿಚಾರ ಎಂದರು

ಇದೆ ತಹಶಿಲ್ದಾರ ಚಂದ್ರಕಾಂತ ಭಜಂತ್ರಿ ಮಾತನಾಡಿ,ಕೃಷ್ಣಾ ಕಿತ್ತೂರು ಗ್ರಾಮದ ಜನರ ಬಹುದಿನಗಳ ಆಸೆ ಇವತ್ತು ಈಡೇರುತ್ತಿದೆ ಸಹಕಾರಿ ಸಂಸ್ಥೆ ಯಲ್ಲಿ ಕನಕದಾಸ ಕುರಿ ಸಾಕಾಣಿಕೆ ಮತ್ತು ಸಹಕಾರ ಸಂಘ ಗ್ರಾಮ,ತಾಲ್ಲೂಕಾ, ಜಿಲ್ಲಾ ಮಟ್ಟದಲ್ಲಿ ಯಶಸ್ವಿಯಾಗಿ ಮುನ್ನಡೆಯಲಿ ಇದು ಯುವ ಪೀಳಿಗೆಗೆ ಇದು ಸಹಕಾರಿಯಾಗಲಿ ಎಂದು ಹೇಳಿದರು

 ಈ ವೇಳೆಯಲ್ಲಿ ಕನಕದಾಸ ಕುರಿ ಸಾಕಾಣಿಕೆ ಮತ್ತು ಸಹಕಾರ ಸಂಘದ ಅಧ್ಯಕ್ಷರಾದ ರಾಜು ಮದನೆ,ಉಪಾಧ್ಯಕ್ಷರಾದ ರಾಜು ಅರ್ಜುನವಾಡ,ನಿರ್ದೇಶಕರುಗಳಾದ ರವೀಂದ್ರ ವಡಗಾಲಿ,ಸಂಜೀವ ಹುಲಗಬಾಳಿ,ರಾಜು ಮುಜಾವರ,ಪರಶುರಾಮ ಖಿದ್ರಾಪೂರೆ,ಮಹದೇವ ಬೆಕ್ಕೇರಿ,ಗುಂಡು ಕರಗಾರ,ಮಹಾನಂದಾ ಹುಲಗಬಾಳಿ,ಕಾಂತಪ್ಪಾ ಕಾಂಬಳೆ,ಸದಾಶಿವ ಪಾಟೀಲ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

ಸಚಿನ್ ಕಾಂಬ್ಳೆ

ವಿ ನ್ಯೂಜ್೨೪ ಕನ್ನಡ ಕಾಗವಾಡ

TRENDING