ಬೆಂಗಳೂರು: ಸಾರಿಗೆ ನೌಕರರ ಬೇಡಿಕೆತನ್ನ ಸರ್ಕಾರ ಈಡೇರಿಸದ ಹಿನ್ನೆಲೆಯಲ್ಲಿ ನಾಳೆಯೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಸರ್ಕಾರಿ ನೌಕಕರಿಗೆ ಅತ್ಯಂತ ಕಡಿಮೆ ಸಂಬಳ ನೀಡಲಾಗ್ತಿದೆ. ಇಷ್ಟು ಕಡಿಮೆ ಸಂಬಳ ಯಾವ ಸರ್ಕಾರಿ ನೌಕರರಿಗೂ ನೀಡುವುದಿಲ್ಲ. ಈ ತಾರತಾಮ್ಯ ನೀತಿ ಸರಿಯಲ್ಲ. ನೀವು ಕೇವಲ ಮನೆಯಲ್ಲಿ ಕುಳಿತು ಶೇ. 8ರಷ್ಟು ಸಂಬಳ ಜಾಸ್ತಿ ಮಾಡ್ತೇವೆ ಅಂತಾ ಹೇಳ್ತೀರಿ. ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳಬೇಕು ಎಂದರು.
ಕೆಲಸಕ್ಕೆ ಹಾಜರಾಗದಿದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಿಬ್ಬಂದಿಗಳ ಮನೆ ಬಾಗಿಲಿಗೆ ನೋಟಿಸ್ ಕಳುಹಿಸುತ್ತೀರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸರಿಯಾದ ಕ್ರಮವಲ್ಲ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ರು.