Saturday, April 17, 2021
Home ಸುದ್ದಿ ಜಾಲ ಬಾಲಿವುಡ್ ನಿರ್ಮಾಪಕರ ಪತ್ನಿ-ಮಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ!

ಇದೀಗ ಬಂದ ಸುದ್ದಿ

ಬಾಲಿವುಡ್ ನಿರ್ಮಾಪಕರ ಪತ್ನಿ-ಮಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ!

ನವದೆಹಲಿ : ಬಾಲಿವುಡ್ ನಿರ್ಮಾಪಕ ಸಂತೋಷ್ ಗುಪ್ತಾ ಪತ್ನಿ ಮತ್ತು ಮಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ.

ಸಂತೋಷ್ ಗುಪ್ತಾ ಪತ್ನಿ ಅಸ್ಮಿತಾ(55) ಮತ್ತು ಮಗಳು ಸೃಷ್ಠಿ ಸಾವನ್ನಪ್ಪಿರುವ ದುರ್ದೈವಿಗಳು. ತಾಯಿ ಮತ್ತು ಮಗಳು ಕಳೆದ ಸೋಮವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವನ್ನಪ್ಪಿದ್ದಾರೆ.

ಕಳೆದ ಸೋಮವಾರ ನಿರ್ಮಾಪಕ ಸಂತೋಷ್ ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಕ್ಕ ಪಕ್ಕದವರು ಅಗ್ನಿಶಾಮಕದಳದ ಸಿಬ್ಬಂದಿಗೆ ವಿಷಯ ತಿಳಿಸಿದ್ದರು. ಸಿಬ್ಬಂದಿಯು ಸ್ಥಳಕ್ಕಾಗಮಿಸಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು.

ಇನ್ನು ಮಾಹಿತಿ ಪ್ರಕಾರ ಸಂತೋಷ್ ಪತ್ನಿ ಅಸ್ಮಿತಾರನ್ನು ಗುಪ್ತಾರನ್ನು ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗಳು ಸೃಷ್ಠಿ ದೇಹವು ಮುಕ್ಕಾಲು ಭಾಗ ಸುಟ್ಟಿದ್ದರಿಂದ ಅವರನ್ನು ಐರೋಲಿ ನ್ಯಾಷನಲ್ ಬರ್ನ್ಸ್ ಸೆಂಟರ್ ಗೆ ರವಾನಿಸಲಾಗಿತ್ತು. ಆದ್ರೆ ತಾಯಿ ಸಾವನ್ನಪ್ಪಿದ ಮರುವದಿನವೇ ಮಗಳು ಸಹ ಪ್ರಾಣ ಬಿಟ್ಟಿದ್ದಾರೆ.

TRENDING