Saturday, April 17, 2021
Home ಅಂತರ್ ರಾಷ್ಟ್ರೀಯ ಅತ್ಯಾಚಾರಕ್ಕೆ ಮಹಿಳೆಯರ ಉಡುಪೇ ಕಾರಣ:ಪಾಕ್ ಪ್ರಧಾನಿ ವಿವಾದತ್ಮಕ ಹೇಳಿಕೆ

ಇದೀಗ ಬಂದ ಸುದ್ದಿ

ಅತ್ಯಾಚಾರಕ್ಕೆ ಮಹಿಳೆಯರ ಉಡುಪೇ ಕಾರಣ:ಪಾಕ್ ಪ್ರಧಾನಿ ವಿವಾದತ್ಮಕ ಹೇಳಿಕೆ

ಪಾಕಿಸ್ತಾನ : ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರಗಳಿಗೆ ಕಾರಣ ಅವರ ಉಡುಪು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರ ಪ್ರಕರಣಗಳ ತಡೆಗಟ್ಟಲು ಸರ್ಕಾರ ಯಾವ ಕ್ರಮಗೈಂಡಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಇಮ್ರಾನ್ ಖಾನ್ ಈ ರೀತಿಯಾದ ಹೇಳಿಕೆ ನೀಡಿದ್ದಾರೆ.

ಇಸ್ಲಾಂನಲ್ಲಿನ ಪರ್ದಾ ಪರಿಕಲ್ಪನೆಯು ಆಕರ್ಷಣೆಯನ್ನು ನಿಯಂತ್ರಿಸುವಂತೆ ಮಾಡುತ್ತದೆ. ತಮ್ಮ ಬಯಕೆಯನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯವಾಗದ ಅನೇಕ ಜನರಿದ್ದಾರೆ. ಅದು ತಾನಾಗಿಯೇ ಒಂದು ಮಾರ್ಗದಲ್ಲಿ ಅಥವಾ ಇನ್ನೊಂದು ರೀತಿ ತಣಿಯಬೇಕು ಎಂದು ಹೇಳಿದ್ದಾರೆ.

ಇನ್ನೂ ಇಮ್ರಾನ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಅವರ ಮಾಜಿ ಪತ್ನಿ ಜೆಮಿಮಾ ಗೋಲ್ಡ್ ಸ್ಮಿತ್ , ಕುರಾನ್ ನ ನುಡಿಯೊಂದನ್ನು ಉಲ್ಲೇಖಿಸಿದ್ದಾರೆ. ‘ಪುರುಷರು ತಮ್ಮ ಕಣ್ಣುಗಳನ್ನು ನಿರ್ಬಂಧಿಸಲು ಮತ್ತು ತಮ್ಮ ಖಾಸಗಿ ಅಂಗಗಳನ್ನು ಕಾಪಾಡಲು ಹೇಳಿ. ಜವಾಬ್ದಾರಿ ಇರುವುದು ಪುರುಷರ ಮೇಲೆ’ ಎಂದು ಕಿಡಿಕಾರಿದ್ದಾರೆ.

TRENDING