Saturday, April 17, 2021
Home ಸುದ್ದಿ ಜಾಲ ಬಿಗ್​ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಆತ್ಮಹತ್ಯೆ ಯತ್ನ!

ಇದೀಗ ಬಂದ ಸುದ್ದಿ

ಬಿಗ್​ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಆತ್ಮಹತ್ಯೆ ಯತ್ನ!

ಕೋಲಾರ: ಬಿಗ್​ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಆತ್ಮಹತ್ಯೆ ಯತ್ನಿಸಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾ.27ರಂದು ಪ್ರಿಯಕರ ನಾಗಾರ್ಜುನ್ ಜತೆ ಚೈತ್ರಾ ಕೊಟ್ಟೂರು ಮದುವೆಯಾಗಿದ್ದರು. ಅಂದು ಸಂಜೆಯೇ ಪತ್ನಿ ವಿರುದ್ಧ ಪತಿ ಪೊಲೀಸ್​ ಠಾಣೆ ಮೆಟ್ಟಿಲೇರುವ ಮೂಲಕ ನವಜೋಡಿ ಮದುವೆ ವಿವಾದ ಸ್ಫೋಟಗೊಂಡಿತ್ತು. ಮದುವೆ ಬಗ್ಗೆ ತಗಾದೆ ತೆಗೆದ ನಾಗಾರ್ಜುನ್ ಪೋಷಕರು ಮತ್ತು ಚೈತ್ರಾ ಕೊಟ್ಟೂರು ಪೋಷಕರು ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ನಾಗಾರ್ಜುನ್ ತನ್ನ ಪೋಷಕರೊಂದಿಗೆ ವಾಪಸ್​ ಆಗಿದ್ದರು. ನವವಧುವಾಗಿ ಕಂಗೊಳಿಸಬೇಕಿದ್ದ ಚೈತ್ರಾ ತನ್ನ ಪೋಷಕರೊಂದಿಗೆ ಕೋಲಾರದ ಮನೆಯಲ್ಲಿದ್ದರು. ಈ ಮಧ್ಯೆ ನಾಗಾರ್ಜುನ್​ ಮತ್ತು ಚೈತ್ರಾ ನಡುವಿನ ಪ್ರೀತಿ ಸಂಕೇತದ ಹಲವು‌ ವಿಡಿಯೋ ಮತ್ತು ಪೋಟೋಗಳನ್ನು ಚೈತ್ರಾ ಹಂಚಿಕೊಂಡಿದ್ದರು.

ಮದುವೆ ವಿವಾದದ ಹಿನ್ನೆಲೆ ‌ಮನನೊಂದ ಚೈತ್ರಾ ಕೋಲಾರದ ಕುರುಬರಪೇಟೆ ಮನೆಯಲ್ಲಿ ಚೈತ್ರಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

TRENDING