Tuesday, April 13, 2021
Home ಜಿಲ್ಲೆ ಮಂಡ್ಯ ಸರಗಳ್ಳತನ ಮಾಡುತಿದ್ದ ಕುಖ್ಯಾತ ಆರೋಪಿಗಳ ಬಂಧನ

ಇದೀಗ ಬಂದ ಸುದ್ದಿ

ಸರಗಳ್ಳತನ ಮಾಡುತಿದ್ದ ಕುಖ್ಯಾತ ಆರೋಪಿಗಳ ಬಂಧನ

 ಮಂಡ್ಯ ; ಸರಗಳ್ಳತನ  ಮಾಡುತ್ತಿದ್ದ ಆರೋಪಿಗಳ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಮಂಡ್ಯ ಪೊಲೀಸರು. ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕು  ಪೋಲಿಸರ ಕಾರ್ಯಾಚರಣೆ ಯಶಸ್ವಿಯಾಗಿದ್ದಾರೆ. ಮಾ.5 ರಂದು ಪಟ್ಟಣದಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿಗಳನ್ನು ಬಂದಿಸಿದ್ದು.

ಹಾಸನದ ಮದನ್ ಹಾಗೂ ಕೆ.ಆರ್.ಪೇಟೆ ತಾಲ್ಲೂಕಿನ ಕುರ್ನೇನಹಳ್ಳಿ ಗ್ರಾಮದ ದೇವರಾಜು ಬಂಧಿತ ಆರೋಪಿಗಳಾಗಿದ್ದು. ಇವರು ಜಯನಗರ ಬಡಾವಣೆಯ ಅರುಣಾ ಎಂಬುವವರ 60 ಗ್ರಾಂ ಮಾಂಗಲ್ಯ ಸರ ಎಗರಿಸಿದ್ದ  ಬಗ್ಗೆ ಪ್ರಕರಣ ದಾಖಲಿಸಿ ಬೇಧಿಸಿದ ಪೊಲೀಸರು.

ವೃತ್ತ ನಿರಕ್ಷಕ ದೀಪಕ್,ಪಿಎಸ್.ಐ,ಬ್ಯಾಟರಾಯಗೌಡ ಹಾಗೂ ಸುರೇಶ್, ವಿಶೇಷ ತಂಡ ರಚಿಸಿದ ಮಂಡ್ಯ ಎಸ್ಪಿ, ಕೊನೆಗೂ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾದ ಪೋಲಿಸ್ ತಂಡಕ್ಕೆ ಎಸ್ಪಿ ಅಶ್ವಿನಿರವರು ಕೆ.ಆರ್.ಪೇಟೆ ಪೋಲಿಸರ ಕಾರ್ಯಾಚರಣೆಗೆ  ಪ್ರಶಂಸಿದ್ದರು..

TRENDING