ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಕೋವಿಡ್-19 ಲಸಿಕೆಯ ಎರಡನೇ ಡೋಸ್ ಅನ್ನು ಹೊಸದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯಲ್ಲಿ ಸ್ವೀಕರಿಸಿದರು.
ಮೋದಿ ಅವರು ಮಾರ್ಚ್ 1ರಂದು ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ನ ಮೊದಲ ಡೋಸ್ ಅನ್ನು ಸ್ವೀಕರಿಸಿದ್ದರು.
ಲಸಿಕೆಯ ಎರಡನೇ ಡೋಸ್ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ಯಾರೆಲ್ಲಾ ಅರ್ಹರಿದ್ದಾರೋ ಅವರೆಲ್ಲರೂ ಕೋವಿಡ್-19 ವಿರುದ್ದದ ಲಸಿಕೆಯನ್ನು ಪಡೆಯಬೇಕೆಂದು ವಿನಂತಿಸಿಕೊಂಡಿದ್ದಾರೆ.
ನಾನು ಇಂದು ಏಮ್ಸ್ ನಲ್ಲಿ ಕೋವಿಡ್-19 ಲಸಿಕೆಯ ಎರಡನೇ ಡೋಸ್ ಪಡೆದಿದ್ದೇನೆ. ವೈರಸ್ ಅನ್ನು ಸೋಲಿಸಲು ನಮಗಿರುವ ಕೆಲವೇ ಮಾರ್ಗಗಳಲ್ಲಿ ಲಸಿಕೆ ಕೂಡ ಒಂದಾಗಿದೆ. ನೀವು ಲಸಿಕೆ ಸ್ವೀಕರಿಸಲು ಅರ್ಹರಿದ್ದರೆ ಶೀಘ್ರವೇ ಲಸಿಕೆ ಸ್ವೀಕರಿಸಿ ಎಂದು ಮೋದಿ ಟ್ವೀಟಿಸಿದರು.