Saturday, April 17, 2021
Home ಅಂತರ್ ರಾಜ್ಯ ಉತ್ತರ ಪ್ರದೇಶದಲ್ಲಿ ಒಂದೇ ದಿನ 8.490 ಮಂದಿಗೆ ಕೊರೊನಾ ಪತ್ತೆ

ಇದೀಗ ಬಂದ ಸುದ್ದಿ

ಉತ್ತರ ಪ್ರದೇಶದಲ್ಲಿ ಒಂದೇ ದಿನ 8.490 ಮಂದಿಗೆ ಕೊರೊನಾ ಪತ್ತೆ

 ನವದೆಹಲಿಉತ್ತರ ಪ್ರದೇಶದಲ್ಲಿ ಒಂದೇ ದಿನ ಅತಿ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗಿದೆ. 24 ಗಂಟೆಗಳಲ್ಲಿ 8,490 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರೆ, 39 ಮಂದಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ.

ಈ ಪೈಕಿ ಶೇ.50 ರಷ್ಟು ಪ್ರಕರಣಗಳು ಲಖನೌ, ಪ್ರಯಾಗ್ ರಾಜ್, ವಾರಾಣಸಿ, ಕಾನ್ಪುರದಲ್ಲಿ ವರದಿಯಾಗಿವೆ. ರಾಜ್ಯದ 6 ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ ಬಳಿಕ ಕೊರೋನಾ ಪ್ರಕರಣಗಳು ಹೆಚ್ಚು ವರದಿಯಾಗಿವೆ.

ಸೆ.11, 2020 ರಂದು ಉತ್ತರ ಪ್ರದೇಶದಲ್ಲಿ ಒಂದೇ ದಿನ 7103 ಮಂದಿಗೆ ಕೊರೋನಾ ದೃಢಪಟ್ಟಿತ್ತು. ಈಗ 8 ಸಾವಿರದಷ್ಟು ಪ್ರಕರಣಗಳು ಒಂದೇ ದಿನ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 39,338ಕ್ಕೆ ಏರಿಕೆಯಾಗಿದ್ದು ಈ ವರೆಗೂ 9,003 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಈ ವರೆಗೂ 66,88,260 ಮಂದಿಗೆ ಕೊರೋನಾ ಲಸಿಕೆಯ ಮೊದಲ ಡೋಸ್ ನ್ನು ನೀಡಲಾಗಿದ್ದು, ಎರಡೂ ಡೋಸ್ ಗಳನ್ನು 11,79,437 ಮಂದಿ ತೆಗೆದುಕೊಂಡಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ಲಖನೌ ನಲ್ಲಿ ಆಸ್ಪತ್ರೆಗಳು ಕೋವಿಡ್-19 ರೋಗಿಗಳನ್ನು ದಾಖಲು ಮಾಡಿಸಿಕೊಳ್ಳುವುದನ್ನು ನಿಲ್ಲಿಸಿವೆ.

 

 

TRENDING