Tuesday, April 13, 2021
Home ಸುದ್ದಿ ಜಾಲ ಕೋವಿಡ್ 19 ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ: ಆರೋಗ್ಯ ಸಚಿವಾಲಯ

ಇದೀಗ ಬಂದ ಸುದ್ದಿ

ಕೋವಿಡ್ 19 ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ: ಆರೋಗ್ಯ ಸಚಿವಾಲಯ

ನವದೆಹಲಿ: ದಿನೇದಿನೇ ದೇಶದಲ್ಲಿ ಕೊರೋನಾ ಅಬ್ಬರ ಹೆಚ್ಚುತ್ತಲೇ ಇದ್ದು , ಐದು ರಾಜ್ಯಗಳಲ್ಲಿ 79,688 ಮಕ್ಕಳಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದೆ ಎಂಬ ಆಘಾತಕಾರಿ ಸಂಗತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡಿದೆ.

ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ ಮಕ್ಕಳಿಗೆ ಕೊರೋನಾ ವೈರಸ್ ವ್ಯಾಕ್ಸಿನ್ ನೀಡುವ ಅಭಿಯಾನ ಆರಂಭಗೊಂಡಿಲ್ಲವಾದ್ದರಿಂದ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಿದೆ . ಇನ್ನು ದೊರೆತಿರುವ ಅಂಕಿಅಂಶಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ಮಾರ್ಚ್ 1 ರಿಂದ ಏಪ್ರಿಲ್ 4 ರ ಮಧ್ಯದಲ್ಲಿ 60,684 ಮಕ್ಕಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು , ಇದರಲ್ಲಿ 9,882 ಮಕ್ಕಳು ಐದು ವರ್ಷದೊಳಗಿನವರಾಗಿದ್ದಾರೆ . ಛತ್ತೀಸ್ತಢದಲ್ಲಿ 5,940 ಮಕ್ಕಳು , ಕರ್ನಾಟಕದಲ್ಲಿ 7,527 ಮಕ್ಕಳು , ಉತ್ತರ ಪ್ರದೇಶ 3,004 ಮಕ್ಕಳಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದೆ .

ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಆರೋಗ್ಯ ತಜ್ಞರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಲ್ಲಿ ಕೋವಿಡ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

TRENDING