Saturday, April 17, 2021
Home ಅಂತರ್ ರಾಜ್ಯ ಲಸಿಕೆ ಕೊರತೆಯಿಂದಾಗಿ ಒಡಿಶಾದ 600 ವ್ಯಾಕ್ಸಿನೇಷನ್ ಕೇಂದ್ರಗಳು ಬಂದ್!

ಇದೀಗ ಬಂದ ಸುದ್ದಿ

ಲಸಿಕೆ ಕೊರತೆಯಿಂದಾಗಿ ಒಡಿಶಾದ 600 ವ್ಯಾಕ್ಸಿನೇಷನ್ ಕೇಂದ್ರಗಳು ಬಂದ್!

 ಭುವನೇಶ್ವರಮಹಾರಾಷ್ಟ್ರ ನಂತರ ಇದೀಗ ಒಡಿಶಾ ಕೊರೋನಾ ಲಸಿಕೆ ಕೊರತೆ ಎದುರಿಸುತ್ತಿದ್ದು, ರಾಜ್ಯ ಸರ್ಕಾರ ಬುಧವಾರ 600ಕ್ಕೂ ಹೆಚ್ಚು ವ್ಯಾಕ್ಸಿನೇಷನ್ ಕೇಂದ್ರಗಳನ್ನು ಬಂದ್ ಮಾಡಿದೆ. ಇದರಿಂದ ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್ ಅಸ್ತವ್ಯಸ್ತಗೊಂಡಿದೆ.

ರಾಜ್ಯಾದ್ಯಂತ ಲಸಿಕೆ ಅಭಿಯಾನ ತೀವ್ರಗೊಳಿಸುವ ಉದ್ದೇಶದಿಂದ ಒಂದೆರಡು ದಿನಗಳ ಹಿಂದೆ 1472 ಕೇಂದ್ರಗಳನ್ನು ತೆರೆಯಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ ಲಸಿಕೆ ದಾಸ್ತಾನು ಕೊರತೆಯಿಂದ ಈಗ 600ಕ್ಕೂ ಹೆಚ್ಚು ಕೇಂದ್ರಗಳು ಬಂದ್ ಆಗಿವೆ.
ರಾಜ್ಯ ಲಸಿಕೆ ಕೊರತೆ ಎದುರಿಸುತ್ತಿರುವುದರಿಂದ ಮಂಗಳವಾರ ಲಸಿಕಾ ಕೇಂದ್ರಗಳ ಸಂಖ್ಯೆಯನ್ನು 1103 ಮತ್ತು ಬುಧವಾರ 800ಕ್ಕೆ ಇಳಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 15 ಲಕ್ಷ ಡೋಸ್‌ ಕೊರೋನಾ ಲಸಿಕೆ ನೀಡಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿದ ನಂತರ ಮಂಗಳವಾರ 3.5 ಲಕ್ಷ ಡೋಸ್‌ಗಳನ್ನು ನೀಡಲಾಗಿತ್ತು. “ಕೋಲ್ಡ್ ಚೈನ್ ಪಾಯಿಂಟ್‌ಗಳ ದಾಸ್ತಾನು ಇಲ್ಲದಿರುವುದರಿಂದ ಪ್ರತಿ ಜಿಲ್ಲೆಯ ಕೆಲವು ವ್ಯಾಕ್ಸಿನೇಷನ್ ಕೇಂದ್ರಗಳನ್ನು ಮುಚ್ಚುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಹೊಸ ಲಸಿಕೆ ಬರಲು ಕನಿಷ್ಠ ಒಂದು ದಿನವಾದರೂ ಬೇಕು ಎಂದು ನಿರ್ದೇಶಕ (ಕುಟುಂಬ ಕಲ್ಯಾಣ) ಡಾ.ಬಿಜಯ್ ಪಾನಿಗ್ರಾಹಿ  ತಿಳಿಸಿದ್ದಾರೆ.

TRENDING