Saturday, April 17, 2021
Home ಸುದ್ದಿ ಜಾಲ ಮಿನಿ ಬಸ್‍ಗಳ ಮುಖಾಮುಖಿ ಡಿಕ್ಕಿ : 16 ಗಣಿ ಕಾರ್ಮಿಕರ ಸಾವು

ಇದೀಗ ಬಂದ ಸುದ್ದಿ

ಮಿನಿ ಬಸ್‍ಗಳ ಮುಖಾಮುಖಿ ಡಿಕ್ಕಿ : 16 ಗಣಿ ಕಾರ್ಮಿಕರ ಸಾವು

ಮೆಕ್ಸಿಕೊ,ಏ.7-ಗಣಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಎರಡು ಬಸ್‍ಗಳ ನಡುವೆ ಅಪಘಾತ ಸಂಭವಿಸಿ 16 ಮಂದಿ ಮೃತಪಟ್ಟು ಇತರ 14 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮೆಕ್ಸಿಕೊದ ಸೊನೊರಾ ರಾಜ್ಯದಲ್ಲಿ ನಡೆದಿದೆ. ನೊಚೆ ಬ್ಯೂನಾ ಗಣಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮತ್ತೊಂದು ಬಸ್‍ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ತೀರಾ ಹದಗೆಟ್ಟಿರುವ ಮಿನಿ ಬಸ್‍ಗಳಲ್ಲಿ ಗಣಿ ಕಾರ್ಮಿಕರು ಪ್ರತಿನಿತ್ಯ ಪ್ರಯಾಣ ಮಾಡುವುದು ಮಾಮೂಲು.

ಅಪಘಾತದಲ್ಲಿ ಮೃತಪಟ್ಟವರೆಲ್ಲಾ ಮೆಕ್ಸಿಕನ್ ಪ್ರಜೆಗಳು ಎಂದು ಪೊಲೀಸರು ತಿಳಿಸಿದ್ದಾರೆ. ಸೊನೊರಾ ರಾಜ್ಯದ ಕಬೋರ್ಕಾ ಪ್ರದೇಶದಿಂದ ಕೆಲ ಮೈಲಿಗಳ ದೂರದಲ್ಲಿರುವ ಚಿನ್ನದ ಅದಿರು ಉತ್ಪಾದಿಸುವ ನೊಚೆ ಬ್ಯೂನಾ ಗಣಿ ಕಾರ್ಮಿಕರು ಮೃತಪಟ್ಟವರು.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ 14 ಮಂದಿ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.

TRENDING