Saturday, April 17, 2021
Home ಅಂತರ್ ರಾಜ್ಯ ಕೊರೊನಾ ಹೆಚ್ಚಳ : ಗುಜರಾತ್ ನ 20 ನಗರಗಳಲ್ಲಿ`ನೈಟ್ ಕರ್ಪ್ಯೂ' ಜಾರಿ

ಇದೀಗ ಬಂದ ಸುದ್ದಿ

ಕೊರೊನಾ ಹೆಚ್ಚಳ : ಗುಜರಾತ್ ನ 20 ನಗರಗಳಲ್ಲಿ`ನೈಟ್ ಕರ್ಪ್ಯೂ’ ಜಾರಿ

 ಅಹಮದಾಬಾದ್: ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗುಜರಾತ್ ರಾಜ್ಯದ 20 ನಗರಗಳು ಮತ್ತು ಎಂಟು ಮಹಾನಗರಗಳಲ್ಲಿ ರಾತ್ರಿ ಕರ್ಪ್ಯೂ ಘೋಷಿಸಲಾಗಿದೆ.

ಮುಖ್ಯಮಂತ್ರಿ ವಿಜಯ್ ರೂಪಾನಿ ಹೊರಡಿಸಿದ ಆದೇಶದ ಪ್ರಕಾರ, ರಾತ್ರಿ 8 ರಿಂದ ಬೆಳಿಗ್ಗೆ 6 ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಏಪ್ರಿಲ್ ತಿಂಗಳ ಎಲ್ಲಾ ಶನಿವಾರಗಳಲ್ಲಿ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗುವುದು. ಅಲ್ಲದೆ, ಮದುವೆಗಳಲ್ಲಿ 100 ಕ್ಕಿಂತ ಹೆಚ್ಚು ಜನರ ಸಭೆಯನ್ನು ಅನುಮತಿಸಲಾಗುವುದಿಲ್ಲ ಎಂದು ಘೋಷಿಸಿದ್ದಾರೆ.

ಗುಜರಾತ್ ನಲ್ಲಿ ಒಂದೇ ದಿನ 3280 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ, 16 ಜನರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ.

TRENDING