Saturday, April 17, 2021
Home ಅಂತರ್ ರಾಷ್ಟ್ರೀಯ ಕೊರೋನಾ ವ್ಯಾಕ್ಸಿನೇಷನ್‌ ನಲ್ಲಿ ಅಮೆರಿಕವನ್ನು ಹಿಂದಿಕ್ಕಿದ ಭಾರತ

ಇದೀಗ ಬಂದ ಸುದ್ದಿ

ಕೊರೋನಾ ವ್ಯಾಕ್ಸಿನೇಷನ್‌ ನಲ್ಲಿ ಅಮೆರಿಕವನ್ನು ಹಿಂದಿಕ್ಕಿದ ಭಾರತ

ನವದೆಹಲಿ: ಕೊರೋನಾ ವ್ಯಾಕ್ಸಿನೇಷನ್‌ ನಲ್ಲಿ ಭಾರತ, ಅಮೆರಿಕವನ್ನೂ ಹಿಂದಿಕ್ಕಿದ್ದು, ಒಂದು ದಿನದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಜನರಿಗೆ ಲಸಿಕೆ ನೀಡಿದೆ. ಭಾರತ ಸರಾಸರಿ ಒಂದು ದಿನಕ್ಕೆ 30,93,861 ಡೋಸ್ ಲಸಿಕೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.

ದೇಶದಲ್ಲಿ ಇದುವರೆಗೆ 8.70 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ತಾತ್ಕಾಲಿಕ ವರದಿಯ ಪ್ರಕಾರ, ಇಂದು ಬೆಳಗ್ಗೆ 7 ಗಂಟೆಯವರೆಗೆ 13,32,130 ಲಸಿಕಾ ಕೇಂದ್ರಗಳ ಮೂಲಕ 8,70,77,474 ಡೋಸ್ ಲಸಿಕೆ ನೀಡಲಾಗಿದೆ.

ಈ ಪೈಕಿ 1ನೇ ಡೋಸ್ ತೆಗೆದುಕೊಂಡ 89,63,724 ಆರೋಗ್ಯ ಕಾರ್ಯಕರ್ತರು ಮತ್ತು ಎರಡನೇ ಡೋಸ್ ತೆಗೆದುಕೊಂಡ 53,94,913 ಆರೋಗ್ಯ ಕಾರ್ಯಕರ್ತರು, 1 ನೇ ಡೋಸ್ ಪಡೆದ 97,36,629 ಫ್ರಂಟ್ ಲೈನ್ ಕಾರ್ಮಿಕರು (ಎಫ್‌ಎಲ್‌ಡಬ್ಲ್ಯೂ), 43,12,826 ಹಾಗೂ 2ನೇ ಡೋಸ್ ತೆಗೆದುಕೊಂಡ ಫ್ರಂಟ್ ಲೈನ್ ಕಾರ್ಮಿಕರು ಸೇರಿದ್ದಾರೆ.

ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಮಧ್ಯಪ್ರದೇಶ, ಕೇರಳಗಳಲ್ಲಿ 60% ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ.

TRENDING