Tuesday, April 13, 2021
Home ಕೋವಿಡ್-19 ದೇಶದಲ್ಲಿ ಒಂದೇ ದಿನ 1.15 ಲಕ್ಷ ಜನರಿಗೆ ಕೊರೊನಾ ಸೋಂಕು, 630...

ಇದೀಗ ಬಂದ ಸುದ್ದಿ

ದೇಶದಲ್ಲಿ ಒಂದೇ ದಿನ 1.15 ಲಕ್ಷ ಜನರಿಗೆ ಕೊರೊನಾ ಸೋಂಕು, 630 ಮಂದಿ ಬಲಿ

 ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಅಬ್ಬರ ಹೆಚ್ಚಾಗಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ದಾಖಲೆಯ 1.15 ಲಕ್ಷ ಜನರಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಮಂಗಳವಾರ ಭಾರತದಲ್ಲಿ 1,15,320 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಹಿಂದಿನ 1,03,796 ರ ದಾಖಲೆ ಹಿಂದಿಕ್ಕಿದೆ.

ಮಂಗಳವಾರ ಭಾರತದಾದ್ಯಂತ ಒಟ್ಟು 630 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ವೈರಸ್ ಸಾವನ್ನಪ್ಪಿದವರ ಸಂಖ್ಯೆ 166,229 ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ 843,754 ಕೋವಿಡ್-19 ಸಕ್ರಿಯ ಪ್ರಕರಣಗಳಿವೆ.

TRENDING