Thursday, July 29, 2021
Homeಜಿಲ್ಲೆಕೋಲಾರಕೋಲಾರ : ಲಾರಿಯಲ್ಲಿ ಆಕಸ್ಮಿಕ ಬೆಂಕಿ ಲಾರಿಯಲ್ಲಿದ್ದ ಕಾಟನ್ ಗಳು ಸಂಪೂರ್ಣ ಭಸ್ಮ

ಇದೀಗ ಬಂದ ಸುದ್ದಿ

ಕೋಲಾರ : ಲಾರಿಯಲ್ಲಿ ಆಕಸ್ಮಿಕ ಬೆಂಕಿ ಲಾರಿಯಲ್ಲಿದ್ದ ಕಾಟನ್ ಗಳು ಸಂಪೂರ್ಣ ಭಸ್ಮ

ಕೋಲಾರ : ಚಲಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದ ಪರಿಣಾಮ ಲಾರಿಯಲ್ಲಿ ತುಂಬಿದ್ದ ಕಾಟನ್ ಗಳು ಸಂಪೂರ್ಣ ಭಸ್ಮ ಗೊಂಡಿದೆ.

ಇಂದು ಬೆಳಗ್ಗೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಆಲಂಬಾಡಿ ಗ್ರಾಮದ ಬಳಿ  ಕಾಟನ್ ತುಂಬಿದ ಲಾರಾಯು ಮಾಲೂರಿನತ್ತ ಹೊರಟಿದ್ದು ಲಾರಿಯಲ್ವಿ ಬೆಂಕಿ ಹೊಗೆಯು ಬರಲಾರಂಭಿಸಿದ್ದು ಚಾಲಕ ಅದರ ಬಗ್ಗೆ ಗಮನ ಹರಿಸುವಷ್ಟರಲ್ಲೇ ಕಾಟನ್ ಗಳೆಲ್ಲಾ ಸುಟ್ಟು ಬೂದಿಯಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಚಾಲಕ ವಾಹನವನ್ನು ಮೈದಾನವೊಂದರಲ್ಲಿ  ನಿಲ್ಲಿಸಿ ನಂತರ ಸ್ಧಳೀಯರ  ಸಹಾಯದಿಂದ ಲಾರಿಯಲ್ಲಿ ಹೊತ್ತಿ ಉರಿಯುತ್ತಿದ್ದ ಕಾಟನ್ ಬಾಕ್ಸ್ ಗಳನ್ನ,‌ಲಾರಿಯಿಂದ ಕೆಳಗಿಸಿದ್ದಾನೆ.

ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರಾದರೂ  ಅಷ್ಟರಲ್ಲಾಗಲೇ ಕಾಟನ್ಗಳೆಲ್ಲಾ ಸುಟ್ಟು ಹೋಗಿದ್ದು ಚಾಲಕನಿಗೂ ಯಾವುದೇ ಪ್ರಾಣಾಪಾಯವಾಗಿಲ್ಲವೆನ್ನಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img