Tuesday, June 15, 2021
Homeಕ್ರೈಂ ನ್ಯೂಸ್ಆನೇಕಲ್ : ಕಟ್ಟಿಗೆಯಿಂದ ಹೊಡೆದು ಮಹಿಳೆಯ ಕೊಲೆ

ಇದೀಗ ಬಂದ ಸುದ್ದಿ

ಆನೇಕಲ್ : ಕಟ್ಟಿಗೆಯಿಂದ ಹೊಡೆದು ಮಹಿಳೆಯ ಕೊಲೆ

ಆಕೆಯ ಹೆಸರು ಫಿರ್ಮ  ಯಾದಗಿರಿ ಮೂಲದ ಈ ಮಹಿಳೆ ಕಳೆದ ಶನಿವಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಸಮೀಪದ ನಾಯ್ಡು ಲೇಔಟ್​ನ ಮನೆಯೊಂದರಲ್ಲಿ ಕೊಲೆಯಾಗಿ ಹೋಗಿದ್ದಾಳೆ . ತನ್ನವರನ್ನು ತೊರೆದು ದೂರದ ಯಾದರಿಗಿಯಿಂದ ಬೆಂಗಳೂರಿಗೆ ಮಕ್ಕಳೊಂದಿಗೆ ಬಂದಿದ್ದ ನಿಗೂಡವಾಗಿ ಕೊಲೆಯಾಗಿ ಹೋಗಿದ್ದಾಳೆ . ಮೃತ ಫಿರ್ಮಗೆ ಒಟ್ಟು ಮೂರು ಮಂದಿ ಮಕ್ಕಳಿದ್ದು, ಆಕೆಯ ಗಂಡ ಆಕೆಯನ್ನು ಹಲವು ವರ್ಷಗಳ ಹಿಂದೆಯೇ ಬಿಟ್ಟು ಹೋಗಿದ್ದ . ಹಾಗಾಗಿ ಆಕೆ‌ ತನ್ನ ಮಕ್ಕಳನ್ನು ಗಾರೆ ಕೆಲಸ ಮಾಡಿ‌ ಪೋಷಣೆ ಮಾಡುತ್ತಿದ್ದು , ತನ್ನ ಎರಡನೇಯ ಮಗನೊಂದಿಗೆ ಪರಪ್ಪನ ಅಗ್ರಹಾರದಲ್ಲಿ ನೆಲೆಸಿದ್ದಳು . ಎಂದಿನಂತೆ ಆಕೆಯ ಎರಡನೆಯ ಮಗ ಹುಸೇನ್ ಕೆಲಸಕ್ಕೆ ಹೋಗಿದ್ದ. ವಾಪಸ್ ಬಂದು ನೋಡಿದಾಗ ಫಿರ್ಮಾ ಕೊಲೆಯಾಗಿತ್ತು. ಅಕ್ಕಪಕ್ಕದವರು ಪೋನ್ ಮಾಡಿ ತಿಳಿಸಿದಾಗ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಇನ್ನೂ ಗಂಡನಿಲ್ಲದ ಫಿರ್ಮಳ ಮನೆಗೆ ಯಾದಗಿರಿ ಮೂಲದ ಮೆಹಬೂಬ್ ಎಂಬಾತ ಆಗಾಗ ಬಂದು ಹೋಗುತ್ತಿದ್ದ . ಕಳೆದ ಶನಿವಾರ ಸಹ ಮೆಹಬೂಬ್ ಫಿರ್ಮ ಒಬ್ಬಂಟಿಯಾಗಿದ್ದಾಗ ಮನೆಗೆ ಬಂದಿದ್ದ. ಸುಮಾರು ಎರಡು ತಾಸಿನ ಬಳಿಕ ಕಿರುಚಾಟ ಚೀರಾಟ ಕೇಳಿದೆ . ಕೆಲ ಹೊತ್ತಿನ ಬಳಿಕ ಚೀರಾಟ ನಿಂತಿದೆ. ಅಲ್ಲಿಂದ ಮೆಹಬೂಬ್ ಸಹ ಪರಾರಿಯಾಗಿದ್ದಾನೆ. ಕೊನೆಗೆ ಸ್ಥಳೀಯರು ಮನೆ ಬಳಿ ಬಂದು ನೋಡಿದಾಗ ಕೊಲೆಯಾಗಿರುವ ಬೆಳಕಿಗೆ ಬಂದಿದೆ. ಯಾರೂ ಇಲ್ಲದ ವೇಳೆ ಫಿರ್ಮಳ ಮನೆಗೆ ಬಂದಿದ್ದ ಮೆಹಬೂಬ್ ಮೇಲೆಯೇ ಪೊಲೀಸರಿಗೆ ಸಂಶಯ ಮೂಡಿದೆ . ಸದ್ಯ ಘಟನೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ . ಶಂಕಿತ ಆರೋಪಿ ಮೆಹಬೂಬ್ ಗಾಗಿ ಪರಪ್ಪನ ಅಗ್ರಹಾರ ಪೊಲೀಸರು ಶೋಧ ನಡೆಸುತ್ತಿದ್ದು , ಇಲ್ಲಿಯವರೆಗೆ ಆರೋಪಿ ಸುಳಿವು ಪತ್ತೆಯಾಗಿಲ್ಲ ಎಂದು ಸ್ಥಳೀಯ ಶಂಕರ್ ತಿಳಿಸಿದ್ದಾರೆ .

ಒಟ್ಟಿನಲ್ಲಿ ಫಿರ್ಮ ಕೊಲೆ ಪ್ರಕರಣದಲ್ಲಿ ಪೊಲೀಸರ ತನಿಖೆ ವೇಳೆ ಅಕ್ರಮ ಸಂಬಂಧದ ವಾಸನೆ ಕಂಡು ಬಂದಿದ್ದು , ಅಕ್ರಮ ಸಂಬಂಧ ವಿಚಾರವಾಗಿ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ. ಹಾಗಾಗಿ ಪೊಲೀಸರ ತನಿಖೆಯಿಂದ ಆರೋಪಿ ಮತ್ತು ಕೊಲೆಗೆ ನಿಖರ ಕಾರಣ ಇನ್ನಷ್ಟೆ ತಿಳಿದು ಬರಬೇಕಿದೆ .

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img