Tuesday, June 15, 2021
Homeಅಂತರ್ ರಾಷ್ಟ್ರೀಯಬ್ರೆಜಿಲ್ ನಲ್ಲಿ 12 ಮಿಲಿಯನ್ ಗಡಿ ದಾಟಿದ ಕೋವಿಡ್ ಕೇಸ್

ಇದೀಗ ಬಂದ ಸುದ್ದಿ

ಬ್ರೆಜಿಲ್ ನಲ್ಲಿ 12 ಮಿಲಿಯನ್ ಗಡಿ ದಾಟಿದ ಕೋವಿಡ್ ಕೇಸ್

ಬ್ರೆಸಿಲಿಯಾ ಜಗತ್ತಿನ ಕೋವಿಡ್​ ಪ್ರಕರಣಗಳ ಪೈಕಿ ಭಾರತ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿದಿರುವ ಬ್ರೆಜಿಲ್​​ನಲ್ಲಿ ಸೋಂಕಿತರ ಸಂಖ್ಯೆ 12 ಮಿಲಿಯನ್​ ಗಡಿ ದಾಟಿರುವುದಾಗಿ ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಮಾಜಿ ಹಣಕಾಸು ಸಚಿವರು, ಸೆಂಟ್ರಲ್​ ಬ್ಯಾಂಕ್ ಮುಖ್ಯಸ್ಥರು ಸೇರಿದಂತೆ ಸುಮಾರು 200 ಬ್ರೆಜಿಲ್ ಅರ್ಥಶಾಸ್ತ್ರಜ್ಞರು ಲಸಿಕೆ ಪ್ರಕ್ರಿಯೆ ಚುರುಕುಗೊಳಿಸುವಂತೆ ಹಾಗೂ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯಲು ಕಠಿಣ ನಿರ್ಬಂಧಗಳನ್ನು ಹೇರುವಂತೆ ಬ್ರೆಜಿಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವೈರಸ್​ಗಿಂತಲೂ ಲಾಕ್‌ಡೌನ್‌ಗಳು ಮತ್ತು ನಿರ್ಬಂಧಗಳು ಜನರಿಗೆ ಹೆಚ್ಚಿನ ತೊಂದರೆಗಳನ್ನು ಉಂಟುಮಾಡುತ್ತವೆ ಎಂಬ ಬ್ರೆಜಿಲ್​ನ ಅಧ್ಯಕ್ಷ ಜೈರ್ ಬೋಲ್ಸೊನಾರೊ ಅವರ ಪ್ರತಿಪಾದನೆಯನ್ನು ತಳ್ಳಿಹಾಕಿರುವ ಅರ್ಥಶಾಸ್ತ್ರಜ್ಞರು, ಲ್ಯಾಟಿನ್ ಅಮೆರಿಕದ ಅತಿದೊಡ್ಡ ರಾಷ್ಟ್ರದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ವಿನಾಶವಾಗುವುದನ್ನು ತಪ್ಪಿಸುವಂತೆ ಕರೆ ನೀಡಿದ್ದಾರೆ.

ಬ್ರೆಜಿಲ್​​ನಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 49,293 ಸೋಂಕಿತರು ಪತ್ತೆಯಾಗಿದ್ದು, 1,383 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲೀಗ ಸೋಂಕಿತರ ಸಂಖ್ಯೆ 1,20,47,526ಕ್ಕೆ ಹಾಗೂ ಸಾವಿನ ಸಂಖ್ಯೆ 2,95,425ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆಯಲ್ಲಿ ಬ್ರೆಜಿಲ್ ಮೊದಲಿನಿಂದಲೂ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿ ಮುಂದುವರೆದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img