Tuesday, June 15, 2021
Homeಕ್ರೈಂ ನ್ಯೂಸ್ಕೋಲ್ಕತ: ಅಪ್ಪನಿಗೆ ಕಂಠಪೂರ್ತಿ ಕುಡಿಸಿ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಮಗಳು!

ಇದೀಗ ಬಂದ ಸುದ್ದಿ

ಕೋಲ್ಕತ: ಅಪ್ಪನಿಗೆ ಕಂಠಪೂರ್ತಿ ಕುಡಿಸಿ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಮಗಳು!

 ಕೋಲ್ಕತ: ಮಗಳೇ ಅಪ್ಪನಿಗೆ ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿರುವ ಭಯಾನಕ ಘಟನೆ ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ನಡೆದಿದೆ. ಅಪ್ಪನಿಂದ ಸಾಕಷ್ಟು ನೊಂದಿದ್ದ ಮಗಳು ಅದೇ ಕಾರಣಕ್ಕೆ ಬೆಂಕಿ ಹಚ್ಚಿರುವುದಾಗಿ ಹೇಳಲಾಗಿದೆ.

ಕ್ರಿಸ್ಟೋಫರ್ ರಸ್ತೆ ಬಳಿಯ ಪಾರ್ಕ್ ಸರ್ಕಸ್​ನ ನಿವಾಸಿಯಾಗಿರುವ 22 ವರ್ಷದ ಹೆಣ್ಣು ಮಗಳು ಇಂತಹ ಕೃತ್ಯಕ್ಕೆ ಕೈ ಹಾಕಿದ್ದಾಳೆ. ಆಕೆ ಭಾನುವಾರದಂದು ತನ್ನ 54 ವರ್ಷದ ತಂದೆಯನ್ನು ಕರೆದುಕೊಂಡು ರೆಸ್ಟೋರೆಂಟ್​ ಒಂದರಲ್ಲಿ ರಾತ್ರಿಯ ಊಟ ಮಾಡಲು ತೆರಳಿದ್ದಾಳೆ. ಊಟ ಮುಗಿಸಿ ವಾಪಾಸಾಗುವಾಗ ಆತನಿಗೆ ಕಂಠ ಪೂರ್ತಿ ಕುಡಿಸಿದ್ದಾಳೆ. ನಂತರ ಹೂಗ್ಲಿ ನದಿ ದಡಕ್ಕೆ ಕರೆದೊಯ್ದು, ಅಲ್ಲಿದ್ದ ಬೆಂಚಿನ ಮೇಲೆ ಕೂರಿಸಿಕೊಂಡು ಮಾತನಾಡಿಸಲಾರಂಭಿಸಿದ್ದಾಳೆ.
ಮೊದಲೇ ಮದ್ಯದ ಅಮಲಿನಲ್ಲಿದ್ದ ತಂದೆ ಸ್ವಲ್ಪ ಹೊತ್ತಿನಲ್ಲಿ ನಿದ್ರೆಗೆ ಜಾರಿದ್ದಾನೆ. ಅದಾದ ನಂತರ ಆತನ ಮೇಲೆ ಸೀಮೆ ಎಣ್ಣೆ ಸುರಿದ ಮಗಳು, ಬೆಂಕಿ ಹಚ್ಚಿದ್ದಾಳೆ. ನಂತರ ಅಲ್ಲಿಂದ ಮನೆಗೆ ಬಂದಿದ್ದಾಳೆ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಸಿಸಿಟಿವಿ ದೃಶ್ಯಾವಳಿ ಕಂಡ ಪೊಲೀಸರು ನೇರವಾಗಿ ಮಗಳ ಬಳಿ ಹೋಗಿ ವಿಚಾರಣೆ ನಡೆಸಿದ್ದಾರೆ. ಆಗ ಆಕೆ ನಿಜಾಂಶ ಬಾಯಿ ಬಿಟ್ಟಿದ್ದಾಳೆ. ನನ್ನ ಅಮ್ಮ ನಾನು ಚಿಕ್ಕವಳಿದ್ದಾಗಲೇ ತೀರಿಕೊಂಡರು. ಅಂದಿನಿಂದ ನನ್ನ ತಂದೆ ನನ್ನನ್ನು ಅತ್ಯಂತ ಹೀನಾಯವಾಗಿ ನೋಡಿಕೊಂಡಿದ್ದ. ಮಾನಸಿಕ ಹಿಂಸೆ ಕೊಡುತ್ತಿದ್ದ. ನನಗೆ ಮದುವೆಯಾದ ಮೇಲೆ ಆ ತೊಂದರೆ ತಪ್ಪಿತ್ತು. ಆದರೆ ಮದುವೆ ಮುರಿದುಬಿದ್ದು ಮತ್ತೆ ತವರು ಮನೆ ಸೇರಿದೆ. ಆಗ ಮತ್ತೆ ತಂದೆ ಅದೇ ಹಿಂಸೆ ಕೊಡಲು ಆರಂಭಿಸಿದೆ. ಅದೇ ನೋವಿನಿಂದ ನಾನು ಅವನನ್ನು ಕೊಲ್ಲುವ ನಿರ್ಧಾರ ಮಾಡಿದೆ ಎಂದು ಮಗಳು ಹೇಳಿಕೊಂಡಿದ್ದಾಳೆ. ಆಕೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img