Tuesday, June 15, 2021
Homeಕ್ರೈಂ ನ್ಯೂಸ್ಹೊಸಪೇಟೆ: ನಗರದಲ್ಲಿ ಕೇಬಲ್ ಆಪರೇಟರ್ ಬರ್ಬರ ಹತ್ಯೆ

ಇದೀಗ ಬಂದ ಸುದ್ದಿ

ಹೊಸಪೇಟೆ: ನಗರದಲ್ಲಿ ಕೇಬಲ್ ಆಪರೇಟರ್ ಬರ್ಬರ ಹತ್ಯೆ

ಹೊಸಪೇಟೆ: ಇತ್ತೀಚಿಗೆ ನಗರದಲ್ಲಿ ಜರುಗಿದ ವಕೀಲರೊಬ್ಬರ ಕೊಲೆ ಪ್ರಕರಣ ಮಾಸುವ‌ ಮುನ್ನವೇ ಸಮೀಪದ ಟಿ.ಬಿ.ಡ್ಯಾಂನಲ್ಲಿ ಕೇಬಲ್ ಆಪರೇಟರ್‌ ಒಬ್ಬರನ್ನು ಶನಿವಾರ ರಾತ್ರಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಟಿ.ಬಿ.ಡ್ಯಾಂ ನಿವಾಸಿ ಮೈಕಲ್ ಜಾನ್( 40) ಕೊಲೆಯಾದ ಕೇಬಲ್ ಆಪರೇಟರ್ ಎಂದು‌ ಗುರುತಿಸಲಾಗಿದೆ‌. ಟಿ.ಬಿ ಡ್ಯಾಂ ಬಳಿ ಹಾದು‌ ಹೋಗಿರುವ ರಾಷ್ಟ್ರೀಯ ಹೆದ್ದಾರಿ ಫ್ಲೈ ಓವರ್ ಕೆಳಭಾಗದಲ್ಲಿ ದುಷ್ಕರ್ಮಿಗಳು ಮೈಕಲ್ ಜಾನ್ ಅವರನ್ನು ಕೊಲೆ ಮಾಡಿದ್ದಾರೆ.

ಹತ್ಯೆ ಮಾಡುವ ಮುನ್ನ ಮೃತ ವ್ಯಕ್ತಿಯನ್ನು ಅಟ್ಟಾಡಿಸಿ, ಮಾರಕಸ್ತ್ರಗಳಿಂದ ಹಲ್ಲೆ ನಡೆಸಿ, ಕಲ್ಲಿನಿಂದ ಮುಖಕ್ಕೆ ಜಜ್ಜಿ ಹತ್ಯೆಗೈದಿದ್ದಾರೆ ಎಂದು ಹೇಳಲಾಗಿದೆ.

ಟಿ.ಬಿ ಡ್ಯಾಂ ಪೊಲೀಸ್ ಠಾಣೆ‌ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಐ ವಿ.ನಾರಾಯಣ ಅವರನ್ನು ಒಳಗೊಂಡಂತೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರ ಬೀಳಬೇಕಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img