Tuesday, June 15, 2021
Homeಜಿಲ್ಲೆಕೋಲಾರಮಾಲೂರು : ಹಾಡಹಗಲೇ ನಡುರಸ್ತೆಯಲ್ಲಿ ಕೊಚ್ಚಿ ರೌಡಿಶೀಟರ್ ಭೀಕರ ಕೊಲೆ

ಇದೀಗ ಬಂದ ಸುದ್ದಿ

ಮಾಲೂರು : ಹಾಡಹಗಲೇ ನಡುರಸ್ತೆಯಲ್ಲಿ ಕೊಚ್ಚಿ ರೌಡಿಶೀಟರ್ ಭೀಕರ ಕೊಲೆ

ಕೋಲಾರ : ಕೋರ್ಟ್ ಗೆ ಹೋಗಿ ವಾಪಸು  ಬರುವಾಗ ರೌಡಿ ಷೀಟರ್ ನೊಬ್ಬನನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಮಾಲೂರು ತಾಲ್ಲೂಕಿನ ಗಂಗಾಪುರ ಕ್ರಾಸ್ ಬಳಿ ನಡೆದಿದೆ. ಗಿರೀಶ್ (30) ಮೃತ ರೌಡಿ ಶೀಟರ್ ಆಗಿದ್ದು ಈತ ಹಾಗೂ ಈತನ ಸ್ನೇಹಿತ

ಕೋರ್ಟಿನಲ್ಲಿ ಕೇಸ್ ಮುಗಿಸಿಕೊಂಡು  ವಾಪಸ್ ಆಗುತ್ತಿದ್ದ ವೇಳೆ  ದುಷ್ಕರ್ಮಿಗಳು ಇವರ ವಾಹನಕ್ಕೆ ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಲಾಂಗ್ ನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಗಿರೀಶನ ಕೊಲೆಗೆ ಹಳೇ ವೈಷಮ್ಯವೇ ಕಾರಣವೆನ್ನಲಾಗಿದೆ.

ಮೃತ ಗಿರೀಶ್, ಮಾಲೂರು ತಾಲೂಕಿನ ಅರಳೇರಿ ಗ್ರಾಮದವನೆಂದು ಪೋಲೀಸರು ತಿಳಿಸಿದ್ದು ಸ್ಥಳಕ್ಕೆ ಸಬ್ ಇನ್ಸ್ ಫೆಕ್ಟರ್ ಪ್ರದೀಪ್ ಹಾಗೂ ಮಾಲೂರಿನ ಹಿರಿಯ ಪೋಲೀಸು ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂದು ತನಿಖೆ ನಡೆಸುತ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img