Sunday, June 13, 2021
Homeಜಿಲ್ಲೆಚಿಕ್ಕಬಳ್ಳಾಪುರಚಿಕ್ಕಬಳ್ಳಾಪುರ: ಕಲ್ಲು ಕ್ವಾರಿ ಹೊಂಡದಲ್ಲಿ ಮುಳುಗಿ ತಾಯಿ, ಮಗಳು ಸಾವು

ಇದೀಗ ಬಂದ ಸುದ್ದಿ

ಚಿಕ್ಕಬಳ್ಳಾಪುರ: ಕಲ್ಲು ಕ್ವಾರಿ ಹೊಂಡದಲ್ಲಿ ಮುಳುಗಿ ತಾಯಿ, ಮಗಳು ಸಾವು

 ಚಿಕ್ಕಬಳ್ಳಾಪುರ: ತಾಲ್ಲೂಕಿನ ಹಾರೋಬಂಡೆ ಬಳಿಯ ಕಲ್ಲು ಕ್ವಾರಿಯ ಹೊಂಡದಲ್ಲಿ ಮುಳಗಿ ಮಂಗಳವಾರ ತಾಯಿ, ಮಗಳು ಮೃತಪಟ್ಟಿದ್ದಾರೆ. ಪೂಜಾ (30), ಮಂಜುಳಾ (8) ಮೃತರು.

10 ವರ್ಷಗಳ ಹಿಂದೆ ಇಲ್ಲಿ ಕಲ್ಲು ಕ್ವಾರಿ ನಡೆಯುತ್ತಿತ್ತು. ಕ್ವಾರಿಯಿಂದ ನಿರ್ಮಾಣವಾದ ಗುಂಡಿಯಲ್ಲಿ ಮಳೆ ನೀರು ಸಂಗ್ರಹವಾಗಿತ್ತು. ಪೂಜಾ ಅವರು ಬಟ್ಟೆ ತೊಳೆಯಲು ತನ್ನ ಇಬ್ಬರು ಮಕ್ಕಳ ಜತೆ ಈ ಹೊಂಡದ ಬಳಿ ತೆರಳಿದ್ದರು.

ಮಂಜುಳಾ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾಳೆ. ಆಕೆಯನ್ನು ರಕ್ಷಿಸಲು ಪೂಜಾ ಸಹ ಮುಂದಾಗಿದ್ದು ಅವರೂ ಮುಳುಗಿದ್ದಾರೆ ಎಂದು ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img