Saturday, April 17, 2021
Home ಜಿಲ್ಲೆ ವಿಜಯಪುರ ವಿಜಯಪುರ: ವ್ಯಕ್ತಿ ಓರ್ವನನ್ನ ಅಪಹರಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಸುಪಾರಿ ಕಿಲ್ಲರ್ ಅರೆಸ್ಟ್

ಇದೀಗ ಬಂದ ಸುದ್ದಿ

ವಿಜಯಪುರ: ವ್ಯಕ್ತಿ ಓರ್ವನನ್ನ ಅಪಹರಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಸುಪಾರಿ ಕಿಲ್ಲರ್ ಅರೆಸ್ಟ್

 ವಿಜಯಪುರ : ವ್ಯಕ್ತಿ ಓರ್ವನನ್ನ ಅಪಹರಿಸಿ ಕೊಲೆ ಮಾಡಿದ ಆರೋಪಿಗಳನ್ನು  ವಿಜಯಪುರ ಗ್ರಾಮೀಣ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಲ್ಲಿಕಾರ್ಜುನ ತಂದೆ ಸಾಯಬಣ್ಣ ಖರಾಟ್ (48), ಸೈಪನ್ ಬಾಗವಾನ್ (45) , ಸಂಜೀವಕುಮಾರ ಮ್ಯಾಳೆಸಿ (35), ಸಮೀರ್ ಆಲಮೇಲ ( 25), ದಸ್ತಗಿರಿ ಅಮೀನಸಾಬ್ ಬಾಗವಾನ್( 23), ಪ್ರಶಾಂತ್ ನಿಂಬಿತೋಟ (28), ನಬಿಸಾಬ ವಣಕಿಳಾಳ( 21) ಬಂಧೀತ ಆರೋಪಿಗಳು

ಹೌದು ಕಳೆದು ತಿಂಗಳು 11.2.2021 ರಂದು ಈರಣ್ಣ ಗೋಟ್ಯಾಳ ಎಂಬುವರನ್ನು ತಿಕೋಟಾ  ರಸ್ತೆಯ ಮೇಟಿಕಟ್ಟಿ ಹಳ್ಳದ ಬಳಿ ಅಪಹರಿಸಿ  ಬಸನಬಾಗೇವಾಡಿ ತಾಲೂಕಿನ ಜೈನಾಪುರ ಕ್ರಾಸ್ ಬಳಿ ಜಮೀನಿನಲ್ಲಿ ಕೊಲೆ ಮಾಡಿ ಶವವನ್ನು ಕೋಲ್ಹಾರ್  ಬ್ರಿಜ್  ಮೇಲಿನಿಂದ ಕ್ರಷ್ಣಾ ನದಿಯಲ್ಲಿ ಬಿಸಾಕಿ ಪರಾರಿಯಾಗಿದ್ದ 7 ಜನ ಆರೋಪಿಗಳನ್ನು ಬಂಧಿಸಿ ಆರೋಪಿತರಿಂದ ಒಂದು ಮಾರುತಿ ಸ್ವೀಪ್ಟ್ ಡಿಜೈಯರ್ ಕಾರು ಮತ್ತು 78300ರೂಪಾಯಿಗಳನ್ನು ವಶ ಪಡಿಸಿಕೊಂಡಿದ್ದಾರೆ.

ಸೂರಜ್ ರಿಸಾಲ್ದಾರ್

ವಿ‌ ನ್ಯೂಸ್ 24 ಕನ್ನಡ

ವಿಜಯಪುರ

TRENDING