Saturday, April 17, 2021
Home ಜಿಲ್ಲೆ ತುಮಕೂರು ಓ ಹೆಣ್ಣೇ ನಿನಗೆ ನೀನೆ ಪ್ರೇರಣೆ, ನಿಮಗೆ ನೀವೆ ಸ್ಪೂರ್ತಿ : ಶಿರಾ ತಹಶಿಲ್ದಾರ ಶ್ರೀಮತಿ...

ಇದೀಗ ಬಂದ ಸುದ್ದಿ

ಓ ಹೆಣ್ಣೇ ನಿನಗೆ ನೀನೆ ಪ್ರೇರಣೆ, ನಿಮಗೆ ನೀವೆ ಸ್ಪೂರ್ತಿ : ಶಿರಾ ತಹಶಿಲ್ದಾರ ಶ್ರೀಮತಿ ಮಮತ

ಶಿರಾ:- ನಗರದ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಅಭಿನಂದನಾ ಕಾರ್ಯಕ್ರಮ.

ಉದ್ಘಾಟಿಸಿದ ತಹಶಿಲ್ದಾರರ ಶ್ರೀಮತಿ ಮಮತ. ಮಹಿಳೆಯರು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮೌಲ್ಯಾಧಾರಿತ ಬದುಕನ್ನು ನೆಡೆಸುತ್ತಾರೆ.ತಾಯಿಯಾಗಿ ಪತ್ನಿಯಾಗಿ. ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತ.ಆಡಳಿತಾಧಿಕಾರಿಯಾಗಿ ವಿಜ್ಞಾನಿಯಾಗಿ ಶಿಕ್ಷಕಿಯಾಗಿ. ಈಗೆ ಹಲವಾರ ಕ್ಷೇತ್ರದಲ್ಲಿ ಪಾತ್ರವನ್ನು ನಿರ್ವಹಿಸುತ್ತಾಳೆ.ಅವಳ ಕ್ಷಮತೆ ಪುರುಷರಿಗಿಂತ ಅದ್ಭುತ. ಹೆಣ್ಣೇ ನಿನಗೆ ನೀನೆ ಪ್ರೇರಣೆ, ನಿಮಗೆ ನೀವೆ ಸ್ಪೂರ್ತಿ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸ್ವಾತಿ ಆಸ್ಪತ್ರೆಯ ಶ್ರೀಮತಿ ಡಾ.ಶಿಲ್ಪರವರು ಸಂಬಂದಗಳನ್ನು ಭಾವನಾತ್ಮಕವಾಗಿ ಬೆಸೆಯುವ ಶಕ್ತಿಯೇ ಮಹಿಳೆ.ಮೌಲ್ಯಗಳನ್ನು ಸಂಸ್ಕೃತಿಯನ್ನು ತಲೆಮಾರಿನಿಂದ ತಲೆಮಾರಿಗೆ ಕೂಂಡೂಯ್ಯವ  ರೂವಾರಿ ಮಹಿಳೆಯರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬ್ರಹ್ಮ ಕುಮಾರಿ ಡಾ.ಕಲಾ.ಬ್ರಹ್ಮ ಕುಮಾರಿ ಪುಷ್ಪಲತ.

ಡಾ.ರಾಮಕೃಷ್ಣ. ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಮತಿ ಭಾರತಿ. ಶ್ರೀಮತಿ ರೇಣುಕಾ.ರಾಜಯೋಗಿ ಡಾ.ಮಹೇಂದ್ರಪ್ಪ. ಬಿಕೆ.ಕಾವೇರಿ.ನಾಗಶ್ರೀ ಬಟ್ ಮತ್ತು. ಬಿಕೆ. ಪದ್ಮನಾಭಿರವರಿಂದ ಭರತನಾಟ್ಯ ಪ್ರದರ್ಶನ ಮಾಡಲಾಯಿತು   ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಅಭಿನಂದಿಸಲಾಯಿತು..

  ಶ್ರೀಮಂತ್ ಶಿರಾ ತುಮಕೂರು ಜಿಲ್ಲೆ

TRENDING