ರಾಯಚೂರು : ಮಾನ್ವಿಯ ಮಾಜಿ ಶಾಸಕ ಹಂಪಯ್ಯ ನಾಯಕ ಅವರ ಇಬ್ಬರು ಮೊಮ್ಮಕ್ಕಳ ಶವ ಬಲ್ಲಟಗಿ ಗ್ರಾಮದ ತೊರೆಯೊಂದರಲ್ಲಿ ಪತ್ತೆಯಾಗಿದೆ .
ಭಾನುವಾರ ಮಾಜಿ ಶಾಸಕ ಹಂಪಯ್ಯ ನಾಯಕ ತಮ್ಮ ಮೊಮ್ಮಕ್ಕಳು ನಾಪತ್ತೆಯಾಗಿರುವುದರ ಬಗ್ಗೆ ತಿಳಿಸಿದರು. ಇದೀಗ ಅವರ ಮಕ್ಕಳ ಮೃತದೇಹ ಪತ್ತೆಯಾಗಿದ್ದು, ಮೃತಪಟ್ಟ ಬಾಲಕರನ್ನು 9 ವರ್ಷದ ವರುಣ್ ಮತ್ತು ಸಣ್ಣಯ್ಯ ಎಂದು ಗುರುತಿಸಲಾಗಿದೆ .
ಬಾಲಕರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿರಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು . ಮಕ್ಕಳನ್ನು ಕಳೆದುಕೊಂಡಿರುವ ಹಂಪಯ್ಯ ನಾಯಕ ಅವರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ .