Saturday, April 17, 2021
Home ಸುದ್ದಿ ಜಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಶ್ವಾನಕ್ಕೆ ಆತ್ಮೀಯ ಬೀಳ್ಕೊಡುಗೆ

ಇದೀಗ ಬಂದ ಸುದ್ದಿ

ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಶ್ವಾನಕ್ಕೆ ಆತ್ಮೀಯ ಬೀಳ್ಕೊಡುಗೆ

ಅಪರಾಧ ಪ್ರಕರಣಗಳನ್ನ ಭೇದಿಸುವಲ್ಲಿ ಪೊಲೀಸ್​ ಇಲಾಖೆಯಷ್ಟೇ ಶ್ವಾನದಳದ ಶ್ರಮವೂ ಇರುತ್ತೆ. ದೇಶಕ್ಕೆ ಸಂಚಕಾರ ತರುವಂತಹ ಭಯಾನಕ ಅಪರಾಧ ಪ್ರಕರಣಗಳಲ್ಲಿ ಶ್ವಾನ ದಳವು ದಿಟ್ಟ ಸೇವೆಯನ್ನ ಸಲ್ಲಿಸಿ ಎಲ್ಲರ ಗೌರವಕ್ಕೆ ಪಾತ್ರವಾದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ.

ಹೀಗಾಗಿ ನಾಸಿಕ್​ ಪೊಲೀಸ್​​ ಅಧಿಕಾರಿಗಳು ಶ್ವಾನ ದಳದಲ್ಲಿ 11 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಲ್ಯಾಬ್​​ರೈಡರ್​​ ತಳಿಯ ನಾಯಿಗೆ ಅದ್ದೂರಿ ಬೀಳ್ಕೊಡುಗೆ ನೀಡಿದ್ದಾರೆ.

ಫೆಬ್ರವರಿ 24ರಂದು ನಾಸಿಕ್​ನ ಪೊಲೀಸ್​ ಅಧಿಕಾರಿಗಳು ಶ್ವಾನದಳದ ಲ್ಯಾಬ್​ರಿಡರ್​ ಶ್ವಾನಕ್ಕೆ ಬೀಳ್ಕೊಡುಗೆ ನೀಡಲು ಬಯಸಿದ್ದಾರೆ. ಹೀಗಾಗಿ ಪೊಲೀಸ್​ ಇಲಾಖೆಯ ವಾಹನವನ್ನ ಹೂವಿನಿಂದ ಅಲಂಕರಿಸಿ ಅದರ ಮೇಲೆ ಶ್ವಾನವನ್ನ ಕೂರಿಸಿ ಮೆರವಣಿಗೆ ಮಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಕಮೆಂಟ್​ ವಿಭಾಗದಲ್ಲಿ ನೆಟ್ಟಿಗರು ಶ್ವಾನದ ಸೇವೆಗೆ ಧನ್ಯವಾದ ಅರ್ಪಿಸಿದ್ದಾರೆ.

TRENDING