Tuesday, April 13, 2021
Home ಜಿಲ್ಲೆ ಕೊಪ್ಪಳ ಕೊಪ್ಪಳ : ಸ್ಮಾರ್ಟ್ ಸಿಟಿ ಗಿಂತಲೂ ಸ್ಮಾರ್ಟ್ ವಿಲೇಜ್ ಬೇಕು - ಅಭಿನವ ಗವಿಶ್ರೀಗಳು

ಇದೀಗ ಬಂದ ಸುದ್ದಿ

ಕೊಪ್ಪಳ : ಸ್ಮಾರ್ಟ್ ಸಿಟಿ ಗಿಂತಲೂ ಸ್ಮಾರ್ಟ್ ವಿಲೇಜ್ ಬೇಕು – ಅಭಿನವ ಗವಿಶ್ರೀಗಳು

ಕೊಪ್ಪಳ : ಗ್ರಾಮ ರಾಜ್ಯ ಮತ್ತು ಗ್ರಾಮೋದ್ದಾರ ಮಹಾತ್ಮಾ ಗಾಂಧೀಜಿಯವರ ಕನಸು,ಹಳ್ಳಿಗಳ ಉದ್ದಾರವೇ ದೇಶದ ಉದ್ದಾರ,ನಾವು ಇವತ್ತು ಸ್ಮಾರ್ಟ್ ಸಿಟಿ ಮಾಡೋ ಮುಂಚೆ ಸ್ಮಾರ್ಟ್ ವಿಲೇಜ್ ಮಾಡಬೇಕಾಗಿದೆ ಎಂದು ಕೊಪ್ಪಳದ ಅಭಿನವ ಗವಿಶ್ರೀಗಳು ಹೇಳಿದರು.

ಶ್ರೀಗಳು ಕೊಪ್ಪಳ ಜಿಲ್ಲೆಯ ಅಡವಿಹಳ್ಳಿಯಲ್ಲಿ ಜಿಲ್ಲಾ ಪಂಚಾಯತ್ ಕೊಪ್ಪಳ, ಸರ್ವೋದಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ  ಸಮಗ್ರ ಅಭಿವೃದ್ಧಿಯ ಸಲುವಾಗಿಅಡವಿ ಹಳ್ಳಿ ಗ್ರಾಮದ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,

ಹಳ್ಳಿಗಳ ಅಭಿವೃದ್ಧಿ ಬಯಸಿದ್ದ ಮಹಾತ್ಮಾ ಗಾಂಧೀಜಿ ಅವರು ದೇಶದ ಜನರ ಮನಸಲ್ಲಿ ಉಳಿದರು,ದೇಶದಲ್ಲಿ ರಾಷ್ಟ್ರಪತಿ ತುಂಬಾ ಜನ ಆದರು, ಆದರೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಒಬ್ಬರೇ, ಗಾಂಧೀಜಿ ಕನಸನ್ನು ನನಸು ಮಾಡಲು ಯುವ ಸಮುದಾಯ ಮುಂದಾಗಬೇಕು ಅಂತಾ ಗವಿಶ್ರೀಗಳು ಆಶೀರ್ವಚಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕ ಹಾಲಪ್ಪ ಆಚಾರ್, ಸಿ ಇ ಓ ರಘುನಂದನ್ ಮೂರ್ತಿ, ಸುಮಿ ಸ್ಟೀಲ್ ನ ಮುಖ್ಯಸ್ಥ ಓ ಪಿ ಸಿಂಗ್ ಸೇರಿದಂತೆ ಸ್ಥಳೀಯ ಜನಪ್ರತಿನಿದಿನಗಳು ಭಾಗವಹಿಸಿದ್ದರು.

ಈರಯ್ಯ ಕುರ್ತಾಕೋಟಿ

ವಿ ನ್ಯೂಸ್ 24

ಕೊಪ್ಪಳ

TRENDING